ಕರಾವಳಿ

ಕೊರಗಜ್ಜನ ಕಾಣಿಕೆ ಹುಂಡಿಗೆ ಮದ್ಯದ ಬಾಟಲಿ ಎಸೆದ ಕಿಡಿಗೇಡಿಗಳು

564

ನ್ಯೂಸ್ ನಾಟೌಟ್ :ಕೆಲವು ದಿನಗಳ ಹಿಂದೆ ಕರಾವಳಿಯ ಹಲವು ಕಡೆ ದುಷ್ಕರ್ಮಿಗಳು ಕೊರಗಜ್ಜನ ಅವಹೇಳನ ಮಾಡಿದ ಘಟನೆ ನಡೆದಿದ್ದವು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೈಪಡ್ಕ ರಸ್ತೆಯಲ್ಲಿರುವ ಸ್ವಾಮಿ ಕೊರಗಜ್ಜನ ಕಾಣಿಕೆ ಹುಂಡಿಗೆ ದುಷ್ಕರ್ಮಿಗಳು ಮದ್ಯದ ಬಾಟಲಿ ಎಸೆದ ಘಟನೆ ಭಾನುವಾರ ತಡರಾತ್ರಿ (ಬೆಳ್ಳಂ ಬೆಳಗ್ಗಿನ ಸಮಯ) ನಡೆದಿದೆ.

ಕುಡಿದ ಮತ್ತಿನಲ್ಲಿ ಇಂತಹ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಭಾನುವಾರ ಬೆಳಗ್ಗೆ ಸ್ಥಳೀಯರು ಪತ್ರಿಕೆ ತೆಗೆದುಕೊಳ್ಳುವುದಕ್ಕಾಗಿ ಸ್ಥಳಕ್ಕೆ ಹೋದಾಗ ವಿಚಾರ ಬೆಳಕಿಗೆ ಬಂದಿದೆ. ಮದ್ಯದ ಬಾಟಲಿಯ ಚೂಪಾದ ಚೂರುಗಳು ಸುತ್ತಮುತ್ತ ಚೆಲ್ಲಾಡಿದ್ದವು. ಈ ವಿಚಾರವನ್ನು ತಕ್ಷಣ ಕೊರಗಜ್ಜ ಸಮಿತಿ ಕೈಪಡ್ಕ ಆಡಳಿತ ಮಂಡಳಿಗೆ ತಿಳಿಸಲಾಯಿತು. ಸ್ಥಳಕ್ಕೆ ಬಂದ ರವಿ ಅವರು ಬಾಟಲಿ ಚೂರುಗಳನ್ನು ತೆರವುಗೊಳಿಸಿದರು.

ವಾಹನದಲ್ಲಿ ಹೋಗುವಾಗ ಕುಡಿದುಕೊಂಡು ಹೋಗಿದ್ದಲ್ಲದೆ ಮುಗಿದ ಬಳಿಕ ಮದ್ಯದ ಬಾಟಲಿಯನ್ನು ಕಟ್ಟೆಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.

See also  ಹಿಂದೂ ನಾಯಕ ಪ್ರವೀಣ್ ಕೊಲೆ ಹಿಂದೆ ಎಸ್ ಡಿ ಪಿ ಐ ಸ್ಕೆಚ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget