ಕ್ರೈಂ

ಭೀಕರ ಅಪಘಾತ, ಲಾರಿಯೊಳಗೆ ಸಂಪೂರ್ಣವಾಗಿ ನುಗ್ಗಿದ ಕಾರು, ಸ್ಥಳದಲ್ಲೇ 6 ಸಾವು

312

ನ್ಯೂಸ್ ನಾಟೌಟ್ : ಲಾರಿ ಮತ್ತು ಇಂಡಿಕಾ‌ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಹೆದ್ದಾರಿಯಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ಇಂಡಿಕಾ ಕಾರಿನ ಟೈರ್ ಸ್ಫೋಟಗೊಂಡಿರುವ ಪರಿಣಾಮ ನಿಯಂತ್ರಣ ಕಳಕೊಂಡು ಕಾರು ಇನ್ನೊಂದು ರಸ್ತೆಗೆ ನುಗ್ಗಿ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ಈ ದುರಂತ ಸಂಭವಿಸಿದೆ.ಕಾರಿನಲ್ಲಿದ್ದ ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ, ರಶ್ಮಿಕಾ ಮೃತರು. ಇವರು ವಿಜಯಪುರ ಜಿಲ್ಲೆಯವರಾಗಿದ್ದು ಬೆಂಗಳೂರಿಗೆ ಹೊರಟಿದ್ದರು ಎಂಬ ಮಾಹಿತಿಯಿದೆ.ಲಾರಿಯ ಮುಂಭಾಗದಲ್ಲಿ ಕಾರು ಪೂರ್ತಿಯಾಗಿ ಒಳನುಗ್ಗಿದ್ದು ಶವಗಳನ್ನು ಹೊರಗಡೆ ತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

See also  ನಟ ದರ್ಶನ್ ರೇಣುಕಾಸ್ವಾಮಿ ಮನೆಗೆ ತೆರಳಿ ಪೋಷಕರಲ್ಲಿ ಕ್ಷಮೆ ಕೇಳ್ತಾರಾ..? ದರ್ಶನ್ ನಮ್ಮ ಮನೆಗೆ ಬಂದ್ರೆ ಊಟ ಹಾಕ್ತೇವೆ ಎಂದ ರೇಣುಕಾಸ್ವಾಮಿ ತಂದೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget