ಉಡುಪಿಕರಾವಳಿಸಿನಿಮಾ

ಕೊಲ್ಲೂರು: ಕಾಂತಾರ ಚಿತ್ರತಂಡ ಹೋಗುತ್ತಿದ್ದ ಮಿನಿ ಬಸ್ ಪಲ್ಟಿ..! 6 ಮಂದಿ ಕಲಾವಿದರಿಗೆ ಗಂಭೀರ ಗಾಯ..!

237

ನ್ಯೂಸ್ ನಾಟೌಟ್: ಚಾಪ್ಟರ್​ 1 ಸಿನಿಮಾ ಕಲಾವಿದರು ತೆರಳುತ್ತಿದ್ದ ಬಸ್​ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಸಿನಿಮಾ ಚಿತ್ರೀಕರಣಕ್ಕಾಗಿ ಜೂನಿಯರ್​ ಕಲಾವಿದರನ್ನು ಕರೆದುಕೊಂಡು ಹೋಗಿದ್ದ ಮಿನಿ ಬಸ್ ರಾತ್ರಿ ಅಪಘಾತಕ್ಕೀಡಾಗಿದೆ.

ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಕಾಂತಾರ ಚಿತ್ರದ ಕಲಾವಿದರು ತೆರಳುತ್ತಿದ್ದ ಬಸ್‌ ಪಲ್ಟಿಯಾಗಿದೆ. ಈ ವೇಳೆ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗಳಾದ ಆರು ಜನರಿಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಜಡ್ಕಲ್ ಮಹಾಲಕ್ಷ್ಮಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಕರಾವಳಿ ಭಾಗದ ಬೇರೆ ಬೇರೆ ಜಾಗಗಳಲ್ಲಿ ಕಾಂತಾರ ಚಾಪ್ಟರ್​ 1 ಚಿತ್ರೀಕರಣ ನಡೆಯುತ್ತಿದೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ 25 ಕಲಾವಿದರು ಈ ಮಿನಿ ಬಸ್‌ನಲ್ಲಿ ಹೋಗುತ್ತಿದ್ದರು. ಕೊಲ್ಲೂರಿನ ದಾರಿ ಮಧ್ಯೆ ಮಿನಿ ಬಸ್​ ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ.
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್​ ಬ್ಯಾನರ್‌ ನಲ್ಲಿ ಕಾಂತಾರ ಚಾಪ್ಟರ್​ 1 ಸಿನಿಮಾ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

Click

https://newsnotout.com/2024/11/ipl-kannada-news-rishab-panth-kannada-news-viral-issue-ipl-bidding/
https://newsnotout.com/2024/11/kannada-news-business-man-and-live-in-relationship-issue/
https://newsnotout.com/2024/11/mysore-chamundeshwari-gold-ratha-kannada-news/
See also  ಕೆರೆಗೆ ಹಾರಿ ಯುವಕ ಆತ್ಮಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget