Latest

ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾದ ಕೋಲಾರ! ಕೇವಲ650 ಗ್ರಾಂ ತೂಕದ ಮಗುವನ್ನು ಬದುಕಿಸಿದ ವೈದ್ಯರು!!

289

ನ್ಯೂಸ್ ನಾಟೌಟ್ : ಅಪರೂಪದ ಘಟನೆಯೊಂದಕ್ಕೆ ಕೋಲಾರ ಸಾಕ್ಷಿಯಾಗಿದೆ.ಅವಧಿಪೂರ್ವ ಜನಿಸಿದ 650 ಗ್ರಾಂ ತೂಕದ ಮಗುವನ್ನು ವೈದ್ಯರು ಬದುಕಿಸಿದ್ದಾರೆ.

ವಂಶೋದಯ ಅಡ್ವಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಕ್ಕಳ ತಜ್ಞರ
ತಂಡ ಸತತ 77 ದಿನ ನಿತ್ಯ 24 ಗಂಟೆ ಆರೈಕೆ ಮಾಡಿ ಮಗುವನ್ನು
ಪೋಷಕರಿಗೆ ಹಸ್ತಾಂತರಿಸಿದೆ. ಈ ವೇಳೆಗೆ ಮಗು 1.66 ಕೆ.ಜಿ. ತೂಕ
ಹೊಂದಿದೆ ಎಂದು ನವಜಾತ ಶಿಶುಗಳ ತಜ್ಞ ವೈದ್ಯ ಡಾ.ಮನೋಜ್
ಕುಮಾರ್‌  ತಿಳಿಸಿದ್ದಾರೆ.

ಮಗು ಜನಿಸಿದಾಗ ಕೇವಲ 650 ಗ್ರಾಂ ತೂಕ ಇತ್ತು. ಶಿಶುವನ್ನು
ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಘಾ ಘಟಕದಲ್ಲಿ ಇರಿಸಿ ಆರೈಕೆ ಮಾಡಲಾಯಿತು.ವಿಶೇಷ ಆರೈಕೆಯ ಜೊತೆಗೆ ಉತ್ತಮ ಚಿಕಿತ್ಸೆ ನೀಡಿದ ಪರಿಣಾಮ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.‘ಸಾಮಾನ್ಯವಾಗಿ ಈ ರೀತಿಯ ಶಿಶುಗಳು ಬದುಕುವುದೇ ಕಷ್ಟ.ವೈದ್ಯರು, ನರ್ಸಿಂಗ್‌ ಸಿಬ್ಬಂದಿ ಹಾಗೂ ಪೋಷಕರ ವಿಶೇಷ ಆರೈಕೆ ಇದಕ್ಕೆ ಪ್ರಮುಖ ಕಾರಣವಾಗಿದೆ.

ಅವಧಿ ಪೂರ್ಣವಾಗುವ ಮುನ್ನವೇ ಜನಿಸಿದ ಶಿಶುಗಳಲ್ಲಿ ಕಡಿಮೆ ತೂಕ, ಉಸಿರಾಟದ ತೊಂದರೆ, ಹಾಲಿನ ಅಜೀರ್ಣತೆ,
ನಂಜು, ಮೆದುಳಿನಲ್ಲಿ ರಕ್ತಸ್ರಾವ, ಹೃದಯ ತೊಂದರೆ ಇರುತ್ತವೆ. ಈ
ಎಲ್ಲ ಸವಾಲುಗಳನ್ನು ಎದುರಿಸಿ ಮಗುವನ್ನು ಆರೈಕೆ ಮಾಡಲಾಗಿದೆ’
ಎಂದು ತಿಳಿಸಿದ್ದಾರೆ.

See also  ಕಬ್ಬಿಣದ ಸಂಕೋಲೆಯಲ್ಲಿ ಬಂಧಿಸಿಕೊಂಡು ವಿಧಾನಸಭೆ ಪ್ರವೇಶಿಸಿದ ಯು‍ಪಿ ಶಾಸಕ..! ಕಾರಣವೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget