ಕರಾವಳಿಪುತ್ತೂರು

ಕೊಕ್ಕಡ,ಕೌಕ್ರಾಡಿ ಭಾಗದಲ್ಲಿ ಮುಂದುವರಿದ ಕಾಡಾನೆಗಳ ಉಪಟಳ, ರಬ್ಬರ್ ಟ್ಯಾಪಿಂಗ್ ವೇಳೆ ಕಣ್ಣಿಗೆ ಕಾಣಿಸಿದ ಸಲಗ!

292

ನ್ಯೂಸ್ ನಾಟೌಟ್ : ಕಾಡಾನೆಗಳ ಉಪಟಳದಿಂದ ಕಂಗೆಟ್ಟಿದ್ದ ಕೊಕ್ಕಡ ಗ್ರಾಮದ ಜನತೆ ಇದೀಗ ಮತ್ತೆ ಮತ್ತೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಷ್ಟ ಪಟ್ಟು ಬೆಳೆದ ರೈತರ ಕೃಷಿ ತೋಟ ಹಾನಿಗೊಳಗಾಗಿದ್ದು, ಈ ಗ್ರಾಮದ ಜನತೆ ಬೇಸತ್ತು ಹೋಗಿದ್ದಾರೆ.

ಕಾಡಾನೆ ದಾಳಿಯಿಂದಾಗಿ ಹಾರ ಬಿಜು ಪಿ.ಪಿ.ಎಂಬವರಿಗೆ ಸೇರಿದ 15ಕ್ಕೂ ಹೆಚ್ಚು ಅಡಿಕೆ ಗಿಡ ಹಾಗೂ 50ಕ್ಕೂ ಹೆಚ್ಚು ಬಾಳೆಗಿಡಗಳು ನಾಶಗೊಂಡಿವೆ. ಪಕ್ಕದಲ್ಲಿ ರಬ್ಬರ್ ತೋಟವಿದ್ದು ಮೌರೀಸ್ ಡಿ.ಸೋಜ ಅವರು ರಾತ್ರಿ ಸುಮಾರು 1.30ರ ವೇಳೆಗೆ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ಕಾಡಾನೆ ಹೆಜ್ಜೆ ಸಪ್ಪಳದ ಶಬ್ದ ಕೇಳಿ ಬಂದಿದೆ ಎಂಬ ಅಭಿಪ್ರಾಯ ಹೇಳುತ್ತಿದ್ದಾರೆ.

ಈ ಸಂದರ್ಭ ಟಾರ್ಚ್‌ಲೈಟ್ ಹಾಕಿ ನೋಡಿದಾಗ ತೋಟಕ್ಕೆ ಆನೆ ದಾಳಿ ನಡೆಸಿರುವುದು ಕಂಡುಬಂದಿದೆ ಎಂದು ಹೇಳುತ್ತಿದ್ದಾರೆ.ಕೊಕ್ಕಡ ಸೇರಿದಂತೆ, ಕೌಕ್ರಾಡಿ ಗ್ರಾಮದ ಕೆಲ ಭಾಗದಲ್ಲಿಯೂ ಕಳೆದ ಕೆಲ ದಿನಗಳಿಂದ ಕೃಷಿ ತೋಟಗಳಿಗೆ ಆನೆ ದಾಳಿ ನಡೆಸಿ ಕೃಷಿ ಹಾನಿಯಾಗುತ್ತಿರುವ ಬಗ್ಗೆ ವರದಿಯಾಗಿದೆ.

See also  ಸುಳ್ಯ: ಹಿರಿಯ ರಾಜಕೀಯ ಮುತ್ಸದ್ದಿ ಚಂದ್ರಶೇಖರ ಮೇಲ್ನಾಡು ಇನ್ನಿಲ್ಲ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget