ಕರಾವಳಿ

ಕೊಕ್ಕಡ: ಲಾಡ್ಜ್ ಪಡೆಯುವುದಕ್ಕೆ ಬಂದು ಸಿಕ್ಕಿಬಿದ್ದ ಅನ್ಯಕೋಮಿನ ಜೋಡಿ

ನ್ಯೂಸ್ ನಾಟೌಟ್:  ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪ ಅನ್ಯ ಕೋಮಿನ ಜೋಡಿಯನ್ನು ಕೊಕ್ಕಡ ಹಿಂದೂ ಕಾರ್ಯಕರ್ತರು ಕಾಪಿನ ಬಾಗಿಲು ಪ್ರದೇಶದಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಆ.12 ರಂದು ಮುಂಜಾನೆ ಬೆಳಕಿಗೆ ಬಂದಿದೆ.

ಯುವಕ ಗದಗ ಮೂಲದ ರಫಿಕ್(21) ಎಂದು ತಿಳಿದುಬಂದಿದೆ. ಆತ ಗದಗದ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು ಖಾಸಗಿ ಲಾಡ್ಜ್ ಪಡೆಯುವುದಕ್ಕೆ ಪ್ರಯತ್ನಿಸಿದ್ದಾನೆ.

ನವ ವಿವಾಹಿತ ಅನ್ಯ ಮತೀಯ ಜೋಡಿ ಎಂದು ತಿಳಿದ ಕೂಡಲೇ ಲಾಡ್ಜ್ ಸಿಬ್ಬಂದಿ ರೂಮ್ ನೀಡಲು ನಿರಾಕರಿಸಿದ್ದಾರೆ. ತಕ್ಷಣ ಅಲ್ಲಿಂದ ಮರಳಿ ಬೆಂಗಳೂರು ಕಡೆಗೆ ಎಸ್ಕೇಪ್ ಆಗಲು ಬಸ್ ಹತ್ತಿದ್ದಾರೆ. ಆಗ ವಾಪಸ್ ಹೋಗುವ ವೇಳೆ ಕೊಕ್ಕಡದಲ್ಲಿ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ಜಮಾವಣೆ ಆಗಿದ್ದಾರೆ. ಕೊಕ್ಕಡ ಪಕ್ಕ ಬಸ್ ನಿಲ್ಲಿಸಿ ಅನ್ಯ ಕೋಮಿನ ಜೋಡಿಯನ್ನು ಹಿಡಿದಿದ್ದಾರೆ. ನಂತರ ಜೋಡಿಯನ್ನು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Related posts

ಪುನೀತ್ ರಾಜ್‍ಕುಮಾರ್ ಅಭಿಮಾನಿ ಆತ್ಮಹತ್ಯೆ

ಸುಳ್ಯ: ಬ್ಯಾಂಕ್ ಆಫ್ ಬರೋಡಾ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್, ರೋಚಕ ಫೈನಲ್ ನಲ್ಲಿ ಮುಗ್ಗರಿಸಿದ ಯೇನೆಪೋಯ ಯೂನಿವರ್ಸಿಟಿ

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಎದುರು ಧ್ವಜಾರೋಹಣ, ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅರಳಿದ ತಿರಂಗ