ಕರಾವಳಿಕ್ರೈಂಸುಳ್ಯ

ಕೊಕ್ಕಡ : ಮರದ ಕೊಂಬೆ ಬಿದ್ದು ಮಹಿಳೆ ಮೃತ್ಯು!

292

ನ್ಯೂಸ್ ನಾಟೌಟ್ :ಮರದ ಕೊಂಬೆಯೊಂದು ಕೆಳಗೆ ಬಿದ್ದು ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಕೊಕ್ಕಡದ ಹಳ್ಳಿಂಗೇರಿ ಎಂಬಲ್ಲಿ ನಡೆದಿದೆ.ಗಿರಿಜಾ ಮೃತಪಟ್ಟಿರುವ ಮಹಿಳೆ.ಅವರಿಗೆ ೫೮ ವರ್ಷ ಪ್ರಾಯವಾಗಿತ್ತು.

ಇಂದು ಬೆಳಗ್ಗಿನ ವೇಳೆ ವ್ಯಕ್ತಿಯೊಬ್ಬರು ಹಳ್ಳಿಂಗೇರಿ ಕ್ವಾರ್ಟಸ್ ಬಳಿ ಮರವೊಂದರ ಗೆಲ್ಲುಗಳನ್ನು ತೆಗೆಯುವ ವೇಳೆ ಈ ದುರಂತ ನಡೆದಿದೆ.ಈ ವೇಳೆ ಮರದ ಕೊಂಬೆ ಮನೆ ಮೇಲೆ ಬಿದ್ದಿತ್ತು ಎನ್ನಲಾಗಿದೆ.ಗಾಬರಿಯಾದ ಮನೆಯೊಳಗಿದ್ದ ಮಹಿಳೆ ಮನೆಯಿಂದ ಹೊರಗೆ ಬಂದಿದ್ದರು ಎಂದು ತಿಳಿದು ಬಂದಿದೆ .ಈ ಸಂದರ್ಭ ಮನೆ ಮೇಲೆ ಬಿದ್ದಿದ್ದ ಮರದ ಕೊಂಬೆ ಮಹಿಳೆ ಮೇಲೆ ಬಿತ್ತು ಎನ್ನಲಾಗಿದೆ.ಗಿರಿಜಾ ಅವರಿಗೆ ಕೈ ಹಾಗೂ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು,ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.ಮೃತರು ಪತಿ ಹಾಗೂ ಓರ್ವ ಮಗನನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಈಗಾಗಲೇ ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.

See also  ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಚಂಪಾ ಷಷ್ಠಿ ಮಹೋತ್ಸವ ಪೂರ್ವಭಾವಿ ಸಭೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget