Uncategorized

ಕೊಡವ ಹಾಕಿ ತಂಡಕ್ಕೆ ಅಮಾನತು ಶಿಕ್ಷೆ, ಹಾಕಿ ಕೂರ್ಗ್ ನಡೆಗೆ ಆಕ್ಷೇಪ

ನ್ಯೂಸ್ ನಾಟೌಟ್: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾಹಬ್ಬ ದಲ್ಲಿ ಮೂರ್ನಾಡು ಕೊಡವ ಸಮಾಜದ ಹಾಕಿ ತಂಡವನ್ನು ಹಾಕಿ ಕೂರ್ಗ್ ಸಂಸ್ಥೆ ಅಮಾನತುಗೊಳಿಸಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಮೂರ್ನಾಡು ಕೊಡವ ಸಮಾಜದ ಅಧ್ಯ ಕ್ಷ ನೆರವಂಡ ಅನೂಪ್ ಉತ್ತಯ್ಯ , ಈ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು ಬಾಳುಗೋಡುವಿನಲ್ಲಿ ನ.17 ರಿಂದ 20 ರವರೆಗೆ ನಡೆದ 8ನೇ ವರ್ಷದ ಕೊಡವ ನಮ್ಮೆ ಯ ಪ್ರಯುಕ್ತ ನಡೆದ ಅಂತರ ಕೊಡವ ಸಮಾಜಗಳ ಹಾಕಿ ಪಂದ್ಯಾ ವಳಿಯಲ್ಲಿ ಮೂರ್ನಾಡು ಕೊಡವ ಸಮಾಜದ ಹತ್ತು ಆಟಗಾರರು ಸೇರಿದಂತೆ 14 ಮಂದಿಯನ್ನು ಮತ್ತು ಶ್ರೀಮಂಗಲ ತಂಡವನ್ನು ಹಾಕಿ ಕೂರ್ಗ್ ಸಂಸ್ಥೆ ಯಾವುದೇ ಮಾಹಿತಿ ನೀಡದೆ ಒಂದು ವರ್ಷ ಅಮಾನತು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಟಗಾರರಿಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಅಮಾನತು ಮಾಡಿ ಪತ್ರಿಕೆಗಳಿಗೆ ಹೇಳಿಕೆ ನೀಡಿರುವುದು ಖಂಡನೀಯ. ಹಾಕಿ ಕೂರ್ಗ್ ಸಂಸ್ಥೆ ಆಸಕ್ತ ಕ್ರೀಡಾಪಟುಗಳ ಕ್ರೀಡಾ ಬೆಳವಣಿಗೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು ಎಂದು ತಿಳಿಸಿದರು.

Related posts

ಸಿಂದಗಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು

ಸಿಟಿ ಬಸ್ ನ ಬ್ರೇಕ್ ಫೈಲ್, ಸ್ಕೂಟರ್ ಗೆ ಡಿಕ್ಕಿ..! ನಿವೃತ್ತ ಮುಖ್ಯೋಪಾಧ್ಯಾಯ ಸ್ಥಳದಲ್ಲೇ ಮೃತ್ಯು..!

ಕೇರಳದಲ್ಲಿ ಕಾಗೆ ರಾಷ್ಟ್ರಧ್ವಜ ಹಾರಿಸಿದ್ದು ಹೌದಾ..? ವೈರಲ್ ವಿಡಿಯೋದ ಅಸಲಿಯತ್ತೇನು..?