ಕರಾವಳಿ

ವಿದೇಶದಲ್ಲಿ ಸಿಲುಕಿದ್ದ ಕೊಡಗಿನ ಮಹಿಳೆ ಸುರಕ್ಷಿತವಾಗಿ ವಾಪಸ್‌

ನ್ಯೂಸ್ ನಾಟೌಟ್: ಏಜೆಂಟ್‌ವೊಬ್ಬರ ಮೋಸದ ಬಲೆಗೆ ಸಿಲುಕಿ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕೊಡಗಿನ ಮಹಿಳೆಯೊಬ್ಬರು ಇದೀಗ ಸುರಕ್ಷಿತವಾಗಿ ತವರು ನೆಲಕ್ಕೆ ವಾಪಸ್ ಆಗಿದ್ದಾರೆ. ಕೊಡಗು ಜಿಲ್ಲಾಡಳಿತ ಅವರನ್ನು ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಪಾರ್ವತಿ ಎಂಬ ಮಹಿಳೆಯು 3 ವರ್ಷಗಳಿಂದ ಕೇರಳದ ತಲಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಮಹಿಳೆಯೊಬ್ಬರು ತಮಿಳುನಾಡಿನ ಊಟಿಯ ಏಜೆಂಟ್‌ ಒಬ್ಬರ ಮೂಲಕ ಹೆಚ್ಚಿನ ಸಂಬಳದ ಕೆಲಸ ಕೊಡಿಸುವ ಆಮಿಷ ಒಡ್ಡಿ ಪಾರ್ವತಿಯನ್ನು ಕುವೈತ್‌ಗೆ 3 ತಿಂಗಳ ಹಿಂದೆಯಷ್ಟೇ ಕಳುಹಿಸಿದರು. ಆದರೆ, ಅದು ಪ್ರವಾಸಿ ವೀಸಾ ಎಂಬುದು ಪಾರ್ವತಿಗೆ ತಿಳಿಯಲಿಲ್ಲ. ತನಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ, ಕೆಲಸವೂ ಇಲ್ಲ, ಕೊಠಡಿಯೊಂದರಲ್ಲಿ ಬಂಧಿಸಿಟ್ಟಿದ್ದಾರೆ ಎಂದು ಆಕೆ ತನ್ನ ತಾಯಿಗೆ ತಿಳಿಸಿದ್ದಾರೆ. ಕೂಡಲೇ ಅವರು ವಿಷಯವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಗಮನಕ್ಕೆ ತಂದಿದ್ದಾರೆ. ಪ‍ರಿಶೀಲಿಸಿದಾಗ ಮಹಿಳೆ ತೆರಳಿರುವುದು 3 ತಿಂಗಳ ಪ್ರವಾಸಿ ವೀಸಾ ಎಂಬುದು ಗೊತ್ತಾಗಿದೆ. ನಂತರ ಜಿಲ್ಲಾಡಳಿತ ಅವರನ್ನು ವಾಪಸ್ ಕರೆ ತಂದಿದೆ.

Related posts

ಮಂಗಳೂರು: ರಿಕ್ಷಾದಲ್ಲಿ 2.50 ಕ್ವಿಂಟಾಲ್ ಗೋಮಾಂಸ ಅಕ್ರಮ ಸಾಗಾಟ..!, ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸ ಕಾರ್ಯಕ್ರಮಕ್ಕೆ ABVP ನೇತೃತ್ವದಲ್ಲಿ ಸಂಘ ಪರಿವಾರದಿಂದ ತೀವ್ರ ವಿರೋಧ, ಪ್ರೊಫೆಸರ್ ಡಾ ಶಂಸುಲ್ ಇಸ್ಲಾಂ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ

ಡಿ. 1 ರಿಂದ  ಫೇಸ್ ಬುಕ್ ನಲ್ಲಿ   ‘ಧಾರ್ಮಿಕ ಮಾಹಿತಿ ನಿಷೇಧ