ಕೊಡಗುಕ್ರೈಂ

ಕೊಡಗು : ಕಾರಿನ ಮೇಲೆ ದಿಢೀರ್ ಕಾಡಾನೆ ದಾಳಿ! ಪ್ರಾಣಾಪಾಯದಿಂದ ಪಾರಾದ ದಂಪತಿ!

46
Spread the love

ನ್ಯೂಸ್ ನಾಟೌಟ್ : ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಇಂದು (ಜೂ. 25) ಸಂಭವಿಸಿದೆ.

ಮತ್ತಿಕಾಡು ಕಾಫಿಬೆಳೆಗಾರ ಕೋರನ ಟಿಪ್ಪು ಎಂಬವರು ಪತ್ನಿಯೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಕುಕ್ಕೇಟಿ ತೋಟದ ಲೈನ್ ಮನೆಯ ಹತ್ತಿರ ಕಾಡಾನೆ ಬಂದು ಕಾರಿಗೆ ದಾಳಿನಡೆಸಿದೆ.

ಈ ವೇಳೆ ಟಿಪ್ಪು ಮತ್ತು ಅವರ ಪತ್ನಿ ಕಾರಿನಿಂದ ಇಳಿದು ಓಡಿದ್ದಾರೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಕಾಡಾನೆ ದಾಳಿಗೆ ಕಾರಿನ ಮುಂಭಾಗ ಜಖಂಗೊಂಡಿದ್ದು, ಬಾನೆಟ್‌ಗೆ ದಂತದಿಂದ ಗುದ್ದಿ ಹಾನಿಗೊಳಿಸಿದ್ದು , ಸಾವಿರಾರು ರೂ ನಷ್ಟವುಂಟಾಗಿದೆ ಎಂದು ತಿಳಿದುಬಂದಿದೆ.

See also  ಎರಡನೇ ಮದುವೆ ಆಗ್ತಾರಾ ನಟಿ ಪ್ರೇಮಾ ?! ಡಿವೋರ್ಸ್..‌ ಡಿಪ್ರೆಷನ್‌.. ನಂತರ ಕ್ಯಾನ್ಸರ್? ಏನಿದು ಗುಸು ಗುಸು ಮಾತು?
  Ad Widget   Ad Widget   Ad Widget