ಕರಾವಳಿಕೊಡಗು

ಮಡಿಕೇರಿ: ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ ತೆರಳುವಾಗ ಅಪಘಾತ..!ಒಂದೇ ಕುಟುಂಬದ ಇಬ್ಬರು ದಾರುಣ ಅಂತ್ಯ

ನ್ಯೂಸ್ ನಾಟೌಟ್ : ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪೌಲ್ ಡಿಸೋಜ ಅವರ ಮೃತದೇಹವು ಗುರುವಾರ ಬೆಳಿಗ್ಗೆ ಸೌಭಾಗ್ಯ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.

ಸುಂಟಿಕೊಪ್ಪದ ಕೆದಕಲ್ ಗ್ರಾಮದ ಏಳನೇ ಮೈಲು ನಿವಾಸಿ ಪೌಲ್ ಡಿಸೋಜ ಅ.29 ರಂದು ಮನೆಯಿಂದ ಹೊರಗೆ ತೆರಳಿದ್ದರು.ಆದರೆ ಪೌಲ್ ಡಿಸೋಜ ಮನೆಗೆ ವಾಪಾಸಾಗಿರಲಿಲ್ಲ.ಮನೆಯವರು ಹುಡುಕಾಟ ನಡೆಸಿ ಸುಳಿವು ದೊರೆಯದಿದ್ದಾಗ ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅದರಂತೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು.ಕೊನೆಗೆ ಪೌಲ್ ಡಿಸೋಜ ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ಮೃತದೇಹದಲ್ಲಿ ಕಲ್ಲುಗಳು ಕಟ್ಟಿಕೊಂಡಿರುವುದು ಗೋಚರಿಸಿದ್ದು,ಇದರ ಸತ್ಯಾಂಶ ಏನೆಂದು ಇನ್ನಷ್ಟೇ ತಿಳಿದು ಬರಬೇಕಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ ಎಂದು ತಿಳಿದು ಬಂದಿದೆ.

ಪೌಲ್ ಡಿಸೋಜ ಅವರ ಅಂತಿಮ ದರ್ಶನಕ್ಕೆ ಕುಟುಂಬಸ್ಥರು ಸೇರಿದಂತೆ ಬಂಧು ಮಿತ್ರರು ಸೇರಿದರು.ಪೌಲ್ ಡಿಸೋಜ ಅವರ ಕುಟುಂಬ ದುಖಃದ ಮಡುವಿನಲ್ಲಿರುವಾಗಲೇ ಮತ್ತೊಂದು ಆಘಾತದ ಸುದ್ದಿ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ಅಂತ್ಯ ಸಂಸ್ಕಾರಕ್ಕೆಂದು ಬೆಂಗಳೂರಿನಿಂದ ಸುಂಟಿಕೊಪ್ಪಕ್ಕೆ ಹೊರಟಿರುವ ವೇಳೆ ಅವರ ಮಗಳು ಹಾಗೂ ಸಂಬಂಧಿಕರು ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ವರದಿಯಾಗಿದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಪೌಲ್ ಮಗಳು ವನಿಷಾ ಡಿಸೋಜ, ಅಣ್ಣನ ಮಕ್ಕಳಾದ ಸಿಲ್ವಿನ್ ಡಿಸೋಜ, ಪ್ರವೀಣ್ ಡಿಸೋಜ ಹಾಗೂ ಇನ್ನಿಬ್ಬರು ಸಂಬಂಧಿಕರು ಸಾವಿನ ಸುದ್ದಿ ಅರಿತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಗುರುವಾರ ಬೆಳಿಗ್ಗೆ ಹೊರಟಿದ್ದರು.

ಕಾರು ಬೆಂಗಳೂರು ಬಳಿಯ ಬಿಡದಿಗೆ ತಲುಪುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಅಪ್ಪಳಿಸಿ ಮಗುಚಿಕೊಂಡಿದೆ. ಕಾರಿನಡಿಯಲ್ಲಿ ಸಿಲುಕಿಕೊಂಡ ಪೌಲ್ ಅವರ ಅಣ್ಣನ ಮಗನಾದ ಸಿಲ್ವಿನ್ ಡಿಸೋಜ(48) ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಕಾರಿನಲ್ಲಿದ್ದ ಮಗ್ದಲೀನ್ ಡಿಸೋಜ,ಪ್ರವೀಣ್ ಡಿಸೋಜ, ಸ್ಟೆಲ್ಲ ಡಿಸೋಜ, ವನಿಷಾ ಡಿಸೋಜ ಗಾಯಗೊಂಡು ಅಕ್ಷಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ಇಬ್ಬರ ಅಂತ್ಯಕ್ರಿಯೆಯು ಸುಂಟಿಕೊಪ್ಪದ ಮಾದಾಪುರ ರಸ್ತೆಯಲ್ಲಿರುವ ಕ್ರೈಸ್ತ ಸ್ಮಶಾನದಲ್ಲಿ ಶುಕ್ರವಾರ ನಡೆಯಿತು.

Related posts

ಮಂಗಳೂರಿನಲ್ಲಿ ‘ಪೊಲೀಸ್’ ಎಂದು ನಂಬಿಸಿ ಇಂಜಿನೀಯರಿಂಗ್‌ ವಿದ್ಯಾರ್ಥಿನಿ ಜೊತೆ ‘ಪೋಲಿಯಾಟ’..! ಎರಡು ಲಾಡ್ಜ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಪಾಪಿ..!

ಪ್ರತಿ ದಿನ ಸುಬ್ರಹ್ಮಣ್ಯಕ್ಕೆ ಬರಲಿದೆ ಪ್ಯಾಸೆಂಜರ್ ರೈಲು, ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾದ ಸಂಸದ ನಳಿನ್‌ ಕುಮಾರ್‌ ಹೇಳಿದ್ದೇನು..?

ಸುಳ್ಯ:ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮಹಡಿ ಮೇಲಿಂದ ಬಿದ್ದು ಕೊನೆಯುಸಿರು..!ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ಈ ನಿರ್ಧಾರಕ್ಕೆ ಬರಲು ಕಾರಣವೇನು?