ಕರಾವಳಿಕೊಡಗುಕ್ರೈಂಸುಳ್ಯ

ಪುತ್ತೂರಿನ ಪ್ರವಾಸಿಗರ ಮೇಲೆ ಕೊಡಗಿನಲ್ಲಿ ಹಲ್ಲೆ..! ಚಿನ್ನ ಎಗರಿಸಿ ಪರಾರಿ..! ವಿಡಿಯೋ ವೀಕ್ಷಿಸಿ

76
Spread the love

ನ್ಯೂಸ್‌ ನಾಟೌಟ್‌: ಕೊಡಗಿನ ಕೋಟೆಬೆಟ್ಟ (Kotebetta) ಪ್ರವಾಸಕ್ಕೆಂದು ಆಗಮಿಸಿದ ಪ್ರವಾಸಿಗರ ಮೇಲೆ ಬೈಕಿನಲ್ಲಿ ಬಂದ ಇಬ್ಬರು ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ಘಟನೆ ಭಾನುವಾರ(ಜೂ.23) ನಡೆದಿದೆ.

ಮಕ್ಕಳು, ಮಹಿಳೆಯರು ಸೇರಿದಂತೆ ಪುತ್ತೂರಿನಿಂದ ಕುಟುಂಬವೊಂದು ಕೋಟೆಬೆಟ್ಟ ಪ್ರವಾಸಿ ತಾಣಕ್ಕೆ ಆಗಮಿಸಿದ ಸಂದರ್ಭ ಬೈಕಿನಲ್ಲಿ ಬಂದ ಇಬ್ಬರು ಪುಂಡರು ಹಲ್ಲೆ ನಡೆಸಿ, ಚಿನ್ನದ ಸರ ಎಗರಿಸಿ ಬೈಕನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಇಬ್ಬರು ಆರೋಪಿಗಳು ಮಾದಾಪುರ ಸಮೀಪದ ನಿವಾಸಿಗಳು ಎಂಬ ವಿಚಾರ ತಿಳಿದು ಬಂದಿದೆ. ದೌರ್ಜನ್ಯಕ್ಕೆ ಒಳಗಾದವರು ಮಾದಾಪುರ ಉಪ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ತಹಶೀಲ್ದಾರ್‌ ಕಚೇರಿಯೊಳಗೆ ಸಿಬ್ಬಂದಿ ಆತ್ಮಹತ್ಯೆ..! ಸಚಿವೆಯ ಬಳಿಯೂ ಅಳಲು ತೋಡಿಕೊಂಡಿದ್ದ ಈತನಿಗೆ ಪರಿಹಾರವೇ ಸಿಕ್ಕಿರಲಿಲ್ಲ..!
  Ad Widget   Ad Widget   Ad Widget   Ad Widget   Ad Widget   Ad Widget