ಕೊಡಗುಸುಳ್ಯ

ಕೊಡಗಿನ ಹುಡುಗಿ ರಾಷ್ಟ್ರೀಯ ಶೂಟಿಂಗ್ ಕೂಟಕ್ಕೆ ಆಯ್ಕೆ, 8ನೇ ತರಗತಿ ಹುಡುಗಿಯ ಪ್ರಚಂಡ ಸಾಧನೆ

ನ್ಯೂಸ್ ನಾಟೌಟ್: ರಾಷ್ಟ್ರೀಯ ರೈಫಲ್ ಸಂಸ್ಥೆ ವತಿಯಿಂದ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆಯೋಜಿಸಲಾದ 66ನೇ ರಾಷ್ಟ್ರೀಯ ಶೂಟಿಂಗ್ ಕೂಟಕ್ಕೆ ಕೊಡಗಿನ ಮಡಿಕೇರಿಯ ಶಾಲಾ ಬಾಲಕಿ ಆಯ್ಕೆಯಾಗಿದ್ದಾರೆ. ಹೆಸರು ಕಾನಡ್ಕ ಧನ್ವಿ, ಈಕೆ ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಬಾಲ್ಯದಿಂದಲೂ ಶೂಟಿಂಗ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಧನ್ವಿ ಹಲವಾರು ಶೂಟಿಂಗ್ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ 19 ವರ್ಷ ವಯೋಮಿತಿಯೊಳಗಿನ ಐಎಸ್ ಎಸ್‌ಎಫ್ ಶೂಟಿಂಗ್ ಸ್ಪರ್ಧೆಯ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಧನ್ವಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

21 ವರ್ಷ ವಯೋಮಿತಿಯೊಳಗಿನ ಕಿರಿಯರ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು. ಇವರು ಮರುಗೋಡಿನ ಕೃಷಿಕ ಕಾನಡ್ಕ ಹನೀಶ್ ಅಪ್ಪಾಜಿ ಹಾಗೂ ಆಶಾ ದಂಪತಿಯ ಪುತ್ರಿಯಾಗಿದ್ದಾರೆ.

https://newsnotout.com/2023/11/shiva-temple-tunnel-issue-worker/

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

Related posts

ಕೊಯನಾಡು: ಗಿಡ ನೆಟ್ಟಿದ್ದಲ್ಲದೆ ಆರೈಕೆಯನ್ನೂ ಮಾಡುತ್ತಿರುವ ಆದರ್ಶ ಫ್ರೆಂಡ್ಸ್ , ಪರಿಸರ ಕಾಳಜಿಗೊಂದು ಬಿಗ್ ಸೆಲ್ಯೂಟ್

ಕೆ.ವಿ.ಜಿ ಶಿಕ್ಷಣ ಕ್ರಾಂತಿ – ಚಾರಿತ್ರಿಕ ಆಯಾಮಗಳು

ಅರಂತೋಡು: ತೂಗು ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರೋಪ್ ಕಟ್ ಆಗಿ ಅವಘಡ, ಓರ್ವನಿಗೆ ಗಂಭೀರ ಗಾಯ