ಕ್ರೈಂ

ಹಠಾತ್ ಹೃದಯಾಘಾತ, ಸಂಪಾಜೆಯ ನಿವೃತ್ತ ಸೊಸೈಟಿ ಮ್ಯಾನೇಜರ್ ನಿಧನ

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆ ಪೆರಾಜೆಯ ಕೊಳಂಗಾಯ ಚಂದ್ರಶೇಖರ ಅವರು ಹಠಾತ್ ಕುಸಿದು ನಿಧನರಾಗಿದ್ದಾರೆ.

ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಚಂದ್ರಶೇಖರ ಕೊಳಂಗಾಯ ಅವರು ಕೊಡಗು ಸಂಪಾಜೆಯ ಪಯಸ್ವಿನಿ ಸೊಸೈಟಿಯಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸಿದ್ದರು. ಆನಂತರ ಪೆರಾಜೆ, ಚೆಂಬು ಬಾಲಂಬಿಯ ಸೊಸೈಟಿಯಲ್ಲಿ ಕೆಲಸ ಮಾಡಿದ್ದರು. ಕೊಡಗು ಸಂಪಾಜೆಯಲ್ಲಿ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ ಲಲಿತಾ ಕೊಳಂಗಾಯ, ಪುತ್ರ ಚರಣ್ ಕೊಳಂಗಾಯ, ಪುತ್ರಿ ಚರಿತ ಕೊಳಂಗಾಯ, ಸೊಸೆ ಭಾಗೀರಥಿ ಚರಣ್, ಮೊಮ್ಮಗ ಹರ್ಷಿಲ್ ಕೊಳಂಗಾಯ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಜಯಲಲಿತಾಗೆ ಸೇರಿದ್ದ 27 ಕೆ.ಜಿ. ಚಿನ್ನ ವಶಪಡಿಸಿಕೊಂಡ ಸರ್ಕಾರ..! ಬೆಂಗಳೂರಿನ ಸಿವಿಲ್ ನ್ಯಾಯಾಲಯ ಪ್ರಕಟಣೆಯಲ್ಲೇನಿದೆ..?

ಒಡಿಶಾ ಆರೋಗ್ಯ ಸಚಿವರ ಎದೆಗೆ ಗುಂಡಿಟ್ಟ ದು‍ಷ್ಕರ್ಮಿಗಳು ! ಸಚಿವರ ಸ್ಥಿತಿ ಗಂಭೀರ – ವಿಡಿಯೋ ನೋಡಿ

ದೇವರಕೊಲ್ಲಿಯ ಅಬ್ಬಿಕೊಲ್ಲಿ ಬಳಿ ಕಾರು ಮತ್ತು ಪಿಕ್ ಅಪ್ ವಾಹನ ನಡುವೆ ಅಪಘಾತ..! ಕಾರಿನಲ್ಲಿದ್ದವರಿಗೆ ಗಾಯ..!