ಕೊಡಗು

ಬಾಲಕನ ಮರ್ಮಾಂಗ ಹಿಡಿದೆಳೆದ ಪ್ರಕರಣ: ಆಸ್ಪತ್ರೆಗೆ ತೆರಳಿ ಬಾಲಕನಿಗೆ ಆರ್ಥಿಕ ಸಹಾಯವನ್ನಿತ್ತ ಕೊಡಗು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

ನ್ಯೂಸ್ ನಾಟೌಟ್: ಹಾಸ್ಟೇಲ್ ನಲ್ಲಿದ್ದ ಸಹ ಪಾಠಿಗಳಿಂದಲೇ ಮರ್ಮಾಂಗದ ಭಾಗಕ್ಕೆ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಬಾಲಕನ ಆರೋಗ್ಯ ವಿಚಾರಣೆಯನ್ನು ಕೊಡಗು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡಿದರು.

ಕಳೆದ ಕೆಲವು ದಿನಗಳ ಹಿಂದೆ ಹಾಸ್ಟೇಲ್ ನಲ್ಲಿದ್ದ ಬಾಲಕನ ಮರ್ಮಾಂಗವನ್ನು ಸಹ ಪಾಠಿಗಳು ಹಿಡಿದೆಳೆದಿದ್ದರು. ಗಂಭೀರ ಗಾಯಗೊಂಡು ಬಾಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಅನಂತ್ ಊರುಬೈಲು ಬಾಲಕನಿಗೆ ಸಾಂತ್ವಾನ ಹೇಳಿ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಆನಂದ ,ನಿರ್ದೇಶಕಿ ವಾಣಿ ಜಗದೀಶ್ , ಸುಜಿತ್ ಕಟ್ಟಕೋಡಿ ಉಪಸ್ಥಿತರಿದ್ದರು.

Related posts

ಮದೆನಾಡು ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಭಾರಿ ಮಣ್ಣು ಕುಸಿತ

ನಾಳೆ (ಜು.11) ಕೊಡಗಿನ ಅಂಗನವಾಡಿ, ಶಾಲೆಗೆ ಮಾತ್ರ ರಜೆ

ಪೆರಾಜೆ: ಕೋಳಿ ಅಂಕದ ಮೇಲೆ ಪೊಲೀಸರ ದಿಢೀರ್ ದಾಳಿ..! ಕೋಳಿ ಹಿಡಿದುಕೊಂಡೇ ಓಡಿದ ಜನ್ರು..!