ಕೊಡಗು

ಸಂಪಾಜೆ: ಶಮಂತ್ ಕೆದಂಬಾಡಿ ರಾಜ್ಯ ಮಟ್ಟದ ಕಬಡ್ಡಿ ಕೂಟಕ್ಕೆ ಆಯ್ಕೆ, ಕೊಡಗು ಸಂಪಾಜೆ ಭಾಗಕ್ಕೆ ಕೀರ್ತಿ ಗರಿ

69
Spread the love

ನ್ಯೂಸ್ ನಾಟೌಟ್: ಕೊಡಗು ಸಂಪಾಜೆ ಪ್ರತಿಭಾನ್ವಿತ ಯುವ ಕಬಡ್ಡಿ ಆಟಗಾರ ಶಮಂತ್ ಕೆದಂಬಾಡಿ ಚೆನ್ನೈನಲ್ಲಿ ನಡೆಯಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಅಂತರ್ ಕಾಲೇಜು ರಾಜ್ಯ ಮಟ್ಟದ ಕಬಡ್ಡಿ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಅವರು ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನಲ್ಲಿ 4ನೇ ವರ್ಷದ ಬಿಎಸ್ಸಿ ಎಂಎಲ್ ಟಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ನವೆಂಬರ್ 1ರಂದು ಚೆನ್ನೈನ ಎಸ್ ಆರ್ ಎಂ ಯೂನಿವರ್ಸಿಟಿನಲ್ಲಿ ನಡೆಯಲಿರುವ ಅಂತರ್ ಕಾಲೇಜು ರಾಜ್ಯ ಮಟ್ಟದ ಕಬಡ್ಡಿ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರು ಕೊಡಗು ಸಂಪಾಜೆ ನಿವಾಸಿ ಕೆದಂಬಾಡಿ ಜಗದೀಶ್- ವಾಣಿ ದಂಪತಿ ಪುತ್ರರಾಗಿದ್ದಾರೆ. ಕಳೆದ ವಾರ ಸೆಲೆಕ್ಷನ್ ಮ್ಯಾಚ್ ಇತ್ತು. ಇದರಲ್ಲಿ ಆಯ್ಕೆಯಾಗಿದ್ದಾರೆ. ನಾಳೆ (ಅಕ್ಟೋಬರ್ 23) ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

See also  ಮಡಿಕೇರಿ: ಡ್ರಗ್ಸ್ ಬಂದಿದೆ ಎಂದು ಕಾಫಿ ಬೆಳೆಗಾರನ ಹೆದರಿಸಿ 2.20 ಕೋಟಿ ರೂ. ದೋಚಿದ ಸೈಬರ್ ಕಳ್ಳರು..!, ಕೋಟಿ..ಕೋಟಿ ಕಳೆದುಕೊಂಡು ಕಂಗಾಲಾದ ವೃದ್ದ
  Ad Widget   Ad Widget   Ad Widget   Ad Widget   Ad Widget   Ad Widget