ಕರಾವಳಿಕೊಡಗುರಾಜಕೀಯ

ಕೊಡಗಿನಲ್ಲಿ ಚಿದಂಬರಂ ಪುತ್ರ ಕಾರ್ತಿಗೆ ಸೇರಿದ ಆಸ್ತಿ ಜಪ್ತಿ‌ ಮಾಡಿದ ಇ.ಡಿ,ಐಎನ್‌ಎಕ್ಸ್ ಮೀಡಿಯಾ ಪ್ರಕರಣ ಜಾಡು ಹಿಡಿದು ಕೊಡಗಿಗೆ ಆಗಮಿಸಿದ್ದ ಅಧಿಕಾರಿಗಳು

ನ್ಯೂಸ್ ನಾಟೌಟ್ : ಕಾಂಗ್ರೆಸ್ ನಾಯಕ ಹಾಗೂ ಸಂಸದ ಕಾರ್ತಿ ಚಿದಂಬರಂ ಅವರಿಗೆ ಸೇರಿದ 11.04 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ‌ ಮಾಡಿದ್ದಾರೆ. ಇವರು ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ.ಐಎನ್‌ಎಕ್ಸ್ ಮೀಡಿಯಾ ಪ್ರಕರಣ ಜಾಡು ಹಿಡಿದು ಕೊಡಗಿಗೆ ಆಗಮಿಸಿದ್ದ ಇ.ಡಿ. ಅಧಿಕಾರಿಗಳು ಕಾರ್ತಿ ಚಿದಂಬರಂ ಅವರಿಗೆ ಸೇರಿದ 11.04 ಕೋಟಿ ರೂಪಾಯಿ ಮೌಲ್ಯದ 3 ಚರಾಸ್ತಿ ಹಾಗೂ 1 ಸ್ಥಿರಾಸ್ತಿಯನ್ನು ಜಪ್ತಿ ಮಾಡಿದ್ದಾರೆ.

2019ರ ಅಕ್ಟೋಬರ್ 16ರಂದು ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣ‌ದಲ್ಲಿ ಚಿದಂಬರಂ ಅವರ ಪುತ್ರನನ್ನೂ ಈ ಹಿಂದೆ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಕೊಡಗಿನಲ್ಲಿ ಹೊಂದಿದ್ದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಅಧಿಕೃತ ಟ್ವಿಟರ್‌ನಲ್ಲಿ ಮಾಹಿತಿ ಲಭ್ಯವಾಗಿದೆ.

Related posts

ಇಸ್ರೇಲ್‌ನಲ್ಲಿ ಸಿಲುಕಿದ 5000ಕ್ಕೂ ಅಧಿಕ ಕರಾವಳಿಗರ ರಕ್ಷಣೆ ಹೇಗೆ? ನಳಿನ್ ಕುಮಾರ್ ಕಟೀಲ್ ವಿದೇಶಾಂಗ ಸಚಿವರಿಗೆ ಬರೆದ ಪತ್ರದಲ್ಲೇನಿದೆ?

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಹೆಣ್ಣಾನೆಯ ಮರಣೋತ್ತರ ಪರೀಕ್ಷೆ ವೇಳೆ ಮರಿ ಆನೆಯ ಮೃತದೇಹ ಪತ್ತೆ..!

ಗೃಹಜ್ಯೋತಿಗೆ ಮೊಬೈಲ್ ನಲ್ಲಿಯೂ ಅರ್ಜಿ ಸಲ್ಲಿಸಬಹುದು!,200 ಯೂನಿಟ್ ಫ್ರೀ ವಿದ್ಯುತ್ ಗೆ ಇವುಗಳನ್ನು ಫಾಲೋ ಮಾಡಿ..