Uncategorized

ಕೊಡಗಿನಲ್ಲಿ ಭಾರಿ ಮಳೆ: ವಾಹನ ಸಂಚಾರಕ್ಕೆ ನಿಷೇಧ

ನ್ಯೂಸ್ ನಾಟೌಟ್: ಭಾರಿ ಮಳೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮಂಗಳೂರು -ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘನ ವಾಹನಗಳ ಸಂಚಾರವನ್ನು ಇಂದಿನಿಂದ (ಶನಿವಾರ) ಅಕ್ಟೋಬರ್ 15 ರ ತನಕ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಬಿ‌.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ.

ವ್ಯಾಪಕ ಮಳೆ ಹಿನ್ನೆಲೆ ಜಿಲ್ಲಾಡಳಿತದಿಂದ ಕ್ರಮವನ್ನು ತೆಗೆದುಕೊಂಡಿದೆ. ಮರದ ದಿಮ್ಮಿ, ಮರಳು ಸಾಗಿಸುವ ವಾಹನಗಳು, 16,200 ಕೆ.ಜಿ ಗಿಂತ ಹೆಚ್ಚಿನ ತೂಕದ ಸರಕು ಸಾಗಣೆ ವಾಹನಗಳು, ಬುಲೆಟ್ ಟ್ಯಾಂಕರ್, ಶಿಪ್ ಕಾರ್ಗೋ ಕಂಟೈನರ್, ಲಾಂಗ್ ಚಾಸೀಸ್ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅಡುಗೆ ಅನಿಲ, ಇಂಧನ ಪೂರೈಕೆ, ಹಾಲು ಪೂರೈಕೆ, ಸರ್ಕಾರಿ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.

Related posts

69,000 ರೂ. ಮೌಲ್ಯದ ಪಡಿತರ ಅಕ್ಕಿ ಕಳ್ಳತನ..! ಚಾಲಕ ವಾಹನ ಬಿಟ್ಟು ಪರಾರಿ

ನೀವು ನೀರಜ್ ಹೆಸರಿನವರೇ? ಹಾಗಿದ್ದರೆ ಸ್ವಾತಂತ್ರ್ಯ ದಿನದಂದು 5 ಲೀಟರ್‌ ಪೆಟ್ರೋಲ್‌ ನಿಮಗೆ ಉಚಿತ..!

ರಾಮನಗರದ ಜನಪ್ರಿಯ ವಂಡರ್​ಲಾ ಅಮ್ಯೂಸ್ ಮೆಂಟ್​ ಪಾರ್ಕ್​ನಲ್ಲಿ ದುರಂತ:ಮೇಲಿಂದ ಬಿದ್ದು ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ