ಕರಾವಳಿಕೊಡಗುರಾಜ್ಯ

ಮಳೆಗಾಲದ ಪ್ರಾಕೃತಿಕ ವಿಕೋಪ ಎದುರಿಸಲು ಕೊಡಗಿಗೆ ಬಂದ ಎನ್‍.ಡಿ.ಆರ್.ಎಫ್, ತಲಾ 15 ಸಿಬ್ಬಂದಿಗಳನ್ನೊಳಗೊಂಡ 4 ತಂಡಗಳ ರಚನೆ

237

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಅಗತ್ಯ ಮುನ್ನೆಚ್ಚರ ವಹಿಸುವ ಸಂಬಂಧ ಈಗಾಗಲೇ ಎನ್‍.ಡಿ.ಆರ್.ಎಫ್ ತಂಡವು ಕೊಡಗಿಗೆ ಆಗಮಿಸಿದೆ.

ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿತ್ತು. ಜೂನ್‌ನಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಿದೆ. ಜನವರಿಯಿಂದ ಇಲ್ಲಿಯ ತನಕ ಜಿಲ್ಲೆಯಲ್ಲಿ 368.58 ಮಿ. ಮೀ. ಮಳೆಯಾಗಿದೆ. ಮುಂಗಾರು ಮಳೆ ಸಮಯದಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದಾದರೂ ನೆರೆ ಹಾವಳಿಯಂತಹ ಪ್ರಕೃತಿ ವಿಕೋಪಗಳು ಸಂಭವಿಸಿದರೆ ಸಾರ್ವಜನಿಕರ ಸಹಾಯಕ್ಕೆ ಧಾವಿಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಡಿಎಆರ್, ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ಉಪ ವಿಭಾಗಗಳ ತಲಾ 15 ಸಿಬ್ಬಂದಿಗಳನ್ನೊಳಗೊಂಡ 4 ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಾಗಿದೆ ಎಂದು ವರದಿ ತಿಳಿಸಿದೆ. ಅಜಯ್ ಕುಮಾರ್ ನೇತೃತ್ವದ ಎನ್‍.ಡಿ.ಆರ್.ಎಫ್ ತಂಡವು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾರನ್ನು ಭೇಟಿ ಮಾಡಿ ಮಳೆಗಾಲದಲ್ಲಿ ಅನುಸರಿಸಬೇಕಾದ ಕಾರ್ಯ ಚಟುವಟಿಕೆಗಳ ಕುರಿತು ಚರ್ಚೆ ನಡೆಸಿದೆ ಎನ್ನಲಾಗಿದೆ.

Click 👇

https://newsnotout.com/2024/06/narendra-modi-oath-taking-invited-to-pejawar-shri
https://newsnotout.com/2024/06/the-python-issue-in-indonesia-kannada-news-women
https://newsnotout.com/2024/06/annamalai-becomes-mp-even-he-lost-in-election
https://newsnotout.com/2024/06/nepala-and-ullala-girl-nomore-issue
See also  ಹೊಲದಲ್ಲಿ ಮನುಷ್ಯರಂತೆ ಬೆಳೆ ಕೊಯ್ಲು ಮಾಡುತ್ತಿರುವ ರೋಬೋಟ್..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget