ನ್ಯೂಸ್ ನಾಟೌಟ್: ಕೊಡಗಿನ ಪೊನ್ನಂಪೇಟೆಯ ಬೇಗೂರಿನ ಕೋಳತೋಡು ಗ್ರಾಮದಲ್ಲಿ ಕತ್ತಿಯಿಂದ ಕೊಚ್ಚಿ ನಾಲ್ವರ ಹತ್ಯೆ ಮಾಡಿದ ಘಟನೆ ಇಂದು(ಮಾ.28) ನಡೆದಿದೆ.
ಕಾಫಿ ತೋಟದ ಲೈನ್ ಮನೆಯಲ್ಲಿ ನಾಲ್ವರ ಬರ್ಬರ ಹತ್ಯೆ ಯಾಗಿದ್ದು, ಕರಿಯ(75), ಗೌರಿ(70), ನಾಗಿ(35), ಕಾವೇರಿ(7) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 35 ವರ್ಷದ ಗಿರೀಶ್ ಕೊಲೆ ಮಾಡಿ ಪರಾರಿಯಾದ ಆರೋಪಿ ಎನ್ನಲಾಗಿದೆ.
ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
View this post on Instagram