ಕೊಡಗು

ಮಡಿಕೇರಿ: ಕೊಲೆ ಆರೋಪಿಯನ್ನು ಮಹಜರು ನಡೆಸಲು ಕರೆದುಕೊಂಡು ಹೋಗಿದ್ದ ವೇಳೆ ಆರೋಪಿ ಎಸ್ಕೇಪ್..! ತೆಲಂಗಾಣದಲ್ಲಿ ಕೊಡಗು ಪೊಲೀಸರಿಗೆ ತಲೆ ನೋವು

ನ್ಯೂಸ್ ನಾಟೌಟ್: ಉದ್ಯಮಿ ರಮೇಶ್ ಕೊಲೆ‌ ಆರೋಪಿಯನ್ನು ಕೊಡಗು ಪೊಲೀಸರು ಮಹಜರು ನಡೆಸಲು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆತ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಇದು ಕೊಡಗು ಪೊಲೀಸರಿಗೆ ದೊಡ್ಡ ತಲೆ ನೋವು ತಂದಿದೆ. ಇದೀಗ ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಉದ್ಯಮಿ ರಮೇಶ್ ಅನ್ನುವವರನ್ನು ತೆಲಂಗಾಣದಲ್ಲಿ ಕೊಲೆ ಮಾಡಿ ಕೊಡಗಿನ ಸುಂಟಿಕೊಪ್ಪದ ಪನ್ಯದ ಕಾಫಿ ಎಸ್ಟೇಟ್ ವೊಂದರಲ್ಲಿ ತಂದು ಸುಟ್ಟು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನು ಬಂಧಿಸಿದ್ದರು. ಈ ಪೈಕಿ ಓರ್ವನಿಗೆ ನ್ಯಾಯಾಂಗ ಬಂಧನವಾಗಿದೆ. ಇನ್ನಿಬ್ಬರು ಆರೋಪಿಗಳ ಪೈಕಿ ಓರ್ವನಾದ ಅಂಕುರ್ ರಾಣಾ ಅನ್ನುವವನನ್ನು ಎರಡು ದಿನಗಳ ಹಿಂದೆ ಕೊಡಗು ಪೊಲೀಸರು ಸ್ಥಳ ಮಹಜರಿಗಾಗಿ ತೆಲಂಗಾಣಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅಲ್ಲಿ ಆತ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ಪರಾರಿ ಸಂಬಂಧ ತೆಲಂಗಾಣ ಉಪ್ಪಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ ಕೊಡಗಿನ ಎರಡು ಎಕ್ಸ್ ಪರ್ಟ್ ಟೀಮ್ ಕೂಡ ತೆಲಂಗಾಣಕ್ಕೆ ತೆರಳಿದ್ದು ಹುಡುಕಾಟ ನಡೆಸುತ್ತಿದ್ದಾರೆ.

Related posts

ಜ.5ಕ್ಕೆ ಬಾಲಚಂದ್ರ ಕಳಗಿ ಸ್ಮರಣಾರ್ಥ 3ನೇ ವರ್ಷದ ಗ್ರಾಮೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಸಾಂಸ್ಕೃತಿಕ ವೈಭವ

ಭಾರಿ ಗುಡುಗು-ಸಿಡಿಲಿನೊಂದಿಗೆ ಸುಳ್ಯಕ್ಕೆ ತಂಪೆರೆದ ಮಳೆರಾಯ, ಬಹು ದಿನಗಳ ಬಳಿಕ ತಂಪಾದ ಇಳೆ

ಮಡಿಕೇರಿ:ಹಾಡಹಗಲಿನಲ್ಲಿಯೇ ರಸ್ತೆಯಲ್ಲೇ ಸಂಚರಿಸುತ್ತಿರುವ ಕಾಡಾನೆಗಳು,ಕಾಡಿಗೆ ಓಡಿಸಿದರೂ ರಸ್ತೆಯತ್ತ ಹೆಜ್ಜೆಯಿಡುತ್ತಿರುವ ಸಲಗ!