ಕ್ರೈಂ

ಕೊಡಗು: ದೇವರ ಹಾಡು ಹಾಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಗೆ ಥಳಿತ

615

ಸೋಮವಾರಪೇಟೆ: ದೇವರಹಾಡು ಹಾಡಲಿಲ್ಲ ಎನ್ನುವ ಕಾರಣಕ್ಕೆ ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸೋಮವಾರ ಪೇಟೆಯಿಂದ ವರದಿಯಾಗಿದೆ. ಥಳಿತಕ್ಕೆ ಒಳಗಾಗಿರುವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ತಕ್ಷಣ ಸ್ಥಳೀಯರು ವಾಹನದ ಮೂಲಕ ಮಂಗಳೂರಿನಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸೋಮವಾರಪೇಟೆಯ ಕುಮಾರಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಾಯಾಳು ಹಂಚಿನಳ್ಳಿ-ಕುಮಾರಳ್ಳಿ ಗ್ರಾಮದ ನಿವಾಸಿ ಎಚ್.ಸಿ.ನೀಲರಾಜು ಎಂದು ಗುರುತಿಸಲಾಗಿದೆ. ಕುಮಾರಳ್ಳಿ ಗ್ರಾಮದ ಶ್ರೀ ಭದ್ರಕಾಳಿ ಉತ್ಸವದಲ್ಲಿ ನೀಲರಾಜು ಕುಟುಂಬದ ಹಿರಿಯರು ದೇವರಹಾಡು ಹೇಳುತ್ತಿದ್ದರು. ಈ ಬಾರಿ ನೀಲರಾಜು ದೇವರ ಕೆಲಸ ಮಾಡಲು ತೆರಳಿದ್ದರು. ಮಧ್ಯರಾತ್ರಿ ಪೂಜೆ ನಡೆಯುತ್ತಿದ್ದ ಸಂದರ್ಭ ದೇವರ ಹಾಡು ಹೇಳುವಂತೆ ನೀಲರಾಜು ಅವರಿಗೆ ಕೆಲವರು ಒತ್ತಡ ಹಾಕಿದರು. ಆದರೆ ನನಗೆ ಹಾಡಲು ಬರುವುದಿಲ್ಲ ಎಂದು ಹೇಳಿದ ಕಾರಣಕ್ಕೆ ತೀವ್ರ ಹಲ್ಲೆನಡೆಸಿದ್ದಾರೆ ಎಂದು ಗಾಯಾಳು ಸಹೋದರ ಎಚ್.ಸಿ.ಪ್ರಸನ್ನ ಸೋ ಮವಾರಪೇಟೆ ಠಾಣೆಯಲ್ಲಿದೂರು ನೀಡಿದ್ದಾರೆ. ಡಿವೈಎಸ್ಪಿ ಶೈಲೇಂದ್ರ, ಇನ್ಸ್ ಪೆಕ್ಟರ್ ಮಹೇಶ್ ನೇತೃತ್ವದ ತಂಡ ತನಿಖೆ ನಡೆಸಿ ಆರೋ ಪಿಗಳನ್ನು ಬಂಧಿಸಿದ್ದಾರೆ.

See also  ರಶ್ಮಿಕಾ ಮಂದಣ್ಣಗೆ ಭದ್ರತೆ ನೀಡೋ ಬಗ್ಗೆ ಪತ್ರ ಬಂದಿಲ್ಲ ಎಂದ ಗೃಹ ಸಚಿವ..! ಶಾಸಕರ ವಿರುದ್ಧವೇ ಪತ್ರದಲ್ಲಿ ಆರೋಪ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget