ಕರಾವಳಿ

ಮಡಿಕೇರಿ:ಕಾಫಿ ತೋಟದಲ್ಲಿ ಪತ್ತೆಯಾಯ್ತು ಹುಲಿ ಮೃತದೇಹ, ಮೈಯಲ್ಲಿ ಕಾಣಿಸಿಕೊಂಡ ಗಾಯದ ಗುರುತುಗಳು

174

ನ್ಯೂಸ್ ನಾಟೌಟ್ : ಮಡಿಕೇರಿ ಭಾಗದಲ್ಲಿ ಹುಲಿಯೊಂದರ ಮೃತದೇಹ ಪತ್ತೆಯಾಗಿದೆ.ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ಕೊಟ್ಟಗೇರಿ ಗ್ರಾಮದ ಕಾಫಿ ತೋಟವೊಂದರಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು,ಅರಣ್ಯ ಅಧಿಕಾರಿಗಳು ಮೃತದೇಹವನ್ನು ಪರಿಶೀಲಿಸಿದ್ದಾರೆ.

ಇದು ಬಹುಶಃ ಬೇರೆ ಪ್ರಾಣಿಗಳೊಂದಿಗೆ ಕಾದಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ಮೈಯಲ್ಲಿ ಗಾಯದ ಗುರುತುಗಳು ಕಂಡು ಬಂದಿವೆ. ಅಂದಾಜು 14 ವರ್ಷದ ಹುಲಿ ನಿತ್ರಾಣದಿಂದ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ತೋಟದ ಮಾಲಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹುಲಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

See also  ಮಂಗಳೂರು: ಟ್ಯಾಂಕರ್ ನಡಿಗೆ ಬಿದ್ದು ವ್ಯಕ್ತಿ ದಾರುಣ ಸಾವು, ಬೈಕ್ ನಲ್ಲಿದ್ದ ಯಮರಾಯ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget