ನ್ಯೂಸ್ ನಾಟೌಟ್:ಕಾಫಿತೋಟದಲ್ಲಿ ಕರಿಮೆಣಸು ಕೊಯ್ಯುತ್ತಿದ್ದಾಗ ಮಹಿಳೆಯೊಬ್ಬರಿಗೆ ವಿದ್ಯುತ್ ಸ್ಪರ್ಶವಾಗಿರುವ ಘಟನೆ ಬಗ್ಗೆ ವರದಿಯಾಗಿದೆ.ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ಘಟನೆ?
ಮಹಿಳೆ ಕರಿಮೆಣಸು ಕೊಯ್ಯುತ್ತಿದ್ದಾಗ ಅಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿದೆ. ಈ ವೇಳೆ ಮಹಿಳೆ ತೀವ್ರ ಗಾಯಗೊಂಡಿದ್ದಾರೆ.ಬುಧವಾರ ಮಧ್ಯಾಹ್ನ 3.30ರ ಸಂದರ್ಭ ಸುಂಟಿಕೊಪ್ಪ ಸಮೀಪದ ಮತ್ತಿಕಾಡು ಕುಟ್ಟೋಟ್ಟಿ ತೋಟದಲ್ಲಿ ದುರ್ಘಟನೆ ಸಂಭವಿಸಿದೆ.ಗಾಯಗೊಂಡಿರುವ ತಮಿಳುನಾಡಿನ ಸೇಲಂ ನಿವಾಸಿ ರತ್ನಾ (45) ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.