ಕರಾವಳಿ

ಮಡಿಕೇರಿ: ಕತ್ತಿಯಿಂದ ಹಲ್ಲೆ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆ;10 ವರ್ಷ ಶಿಕ್ಷೆ ಮತ್ತು 15,500 ರೂ.ದಂಡ ವಿಧಿಸಿದ ಕೋರ್ಟ್‌

233

ನ್ಯೂಸ್‌ ನಾಟೌಟ್‌ : 2022ರ ಮೇ 11ರಂದು ಅರಣ್ಯ ರಕ್ಷಕರೋರ್ವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ಶಿಕ್ಷೆ ವಿಧಿಸಿದೆ.ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 15,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಗಾಳಿಬೀಡು ಕಾನೆಕಂಡಿ ನಿವಾಸಿ ತಿಮ್ಮಯ್ಯ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ ಎಂದು ತಿಳಿದು ಬಂದಿದೆ.


ಅರಣ್ಯ ರಕ್ಷಕ ಅಪ್ಪಣ್ಣ ರೈ ಅವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅವರನ್ನು ದಾರಿ ಮಧ್ಯೆ ತಡೆದ ತಿಮ್ಮಯ್ಯ ಈ ಕೃತ್ಯವೆಸಗಿದ್ದಾನೆ. ಗಾಳಿಬೀಡು ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು ತಮ್ಮ ಮನೆಯ ಪಕ್ಕದ ಜಾಗವನ್ನು ತೋರಿಸಿಕೊಟ್ಟಿದ್ದೀಯ ಎಂದು ಪ್ರಶ್ನಿಸಿ ಕತ್ತಿಯಿಂದ ಕಡಿಯಲು ಮುಂದಾಗಿದ್ದ. ಈ ವೇಳೆ ಅಪ್ಪಣ್ಣ ರೈ ಅವರು ಎಡಕೈಯಿಂದ ತಡೆದಾಗ ಅವರ ಕೈ ಬೆರಳುಗಳು ತುಂಡಾಗಿದ್ದವು. ತಿಮ್ಮ ಯ್ಯ ಮತ್ತೂಮ್ಮೆ ಹಲ್ಲೆ ಮಾಡಿದಾಗ ಅಪ್ಪಣ್ಣ ರೈ ತಮ್ಮ ಬಲಕೈಯಿಂದ ತಡೆಯಲು ಪ್ರಯತ್ನಿಸಿದಾಗ ಬಲ ಕೈಗೆ ಕೂಡ ಗಂಭೀರ ಗಾಯವಾಗಿತ್ತು ಎಂದು ಆರೋಪಿಸಲಾಗಿತ್ತು.

ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಠಾಣಾಧಿಕಾರಿ ವಾಣಿಶ್ರೀ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾ ಧೀಶರಾದ ಎಚ್‌. ಸಿ. ಶ್ಯಾಮ್‌ ಪ್ರಸಾದ್‌ ಅವರು ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 15,500 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಕೆ.ಜೆ.ಅಶ್ವಿ‌ನಿ ವಾದ ಮಂಡಿಸಿದ್ದಾರೆ.

See also  ಧಾರಾಕಾರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ..! ಹಲವೆಡೆ ಸೇತುವೆ ಮುಳುಗಡೆ, ಕಳಸ-ಉಡುಪಿ ಸಂಪರ್ಕ ಬಂದ್‌
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget