ಕರಾವಳಿಕೊಡಗು

ಕೊಡಗು: ಗಾಳಿ-ಮಳೆಗೆ ಧರೆಗುರುಳಿದ ಮರಗಳು! ನಾಪೋಕ್ಲು- ಭಾಗಮಂಡಲ ರಸ್ತೆ ಸ್ಥಗಿತಗೊಳ್ಳುವ ಭೀತಿ!

ನ್ಯೂಸ್‌ ನಾಟೌಟ್‌: ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಸುಂಟಿಕೊಪ್ಪದಲ್ಲಿ ಮರಗಳು ಗಾಳಿಗೆ ಧರೆಗುರುಳಿದ್ದು, ಭಾಗಮಂಡಲದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನಾಪೋಕ್ಲು- ಭಾಗಮಂಡಲ ರಸ್ತೆಗೆ ನೀರು ಬಂದಿದ್ದು, ಸಂಚಾರ ಸ್ಥಗಿತಗೊಳ್ಳುವ ಭೀತಿ ಉಂಟಾಗಿದೆ.

ಕಲ್ಮಂಟಿ ಜಂಕ್ಷನ್ ನ ಕಾರೆಕಾಡ್- ಗರ್ವಾಲೆ ರಸ್ತೆಯಲ್ಲಿ ಹಾಗೂ ಸುಂಟಿಕೊಪ್ಪ- ಮಾದಾಪುರ ರಸ್ತೆಯ ಪನ್ಯ ಗ್ರಾಮದ ಸಮೀಪ ರಸ್ತೆಗೆ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಸಂಚಾರ ಸ್ಥಗಿತಗೊಂಡಿದೆ.

ಮಡಿಕೇರಿ ತಾಲ್ಲೂಕು ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ನಾಪೋಕ್ಲು ಸಮೀಪದ ಚೆರಿಯಾಪರಂಬುವಿನ ಕಾವೇರಿ ಹೊಳೆಯ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆಯ ಮೇಲೆ ಒಂದರಿಂದ ಒಂದೂವರೆ ಅಡಿ ನೀರು ನಿಂತಿದೆ. ಕುಂಜಿಲ ಗ್ರಾಮದ ಮಕ್ಕಿ ಉಮ್ಮರ್ ಎಂಬುವವರ ಮನೆಯ ಚಾವಣಿಯ ಶೀಟ್ ಗಳು ಹಾರಿ ಹೋಗಿವೆ ಎಂದು ವರದಿ ತಿಳಿಸಿದೆ.

Related posts

“ನೀ ಅತ್ತಂಗೆ ಮಾಡು ನಾನು ಸತ್ತಂಗೆ ಮಾಡ್ತೀನಿ, ಕುಡಿದು ಹಾಳಾಗಿ ಹೋಗಿ ಕಾಂಗ್ರೆಸ್‌ನ 6ನೇ ಗ್ಯಾರಂಟಿ”, ಮಾಜಿ ಸಚಿವ ಸಿ.ಟಿ.ರವಿ ಹೀಗೆ ಹೇಳಿದ್ಯಾಕೆ..?

ಕೆ. ವಿ. ಜಿ. ಅಮರಜ್ಯೋತಿ ಪಿಯು ಕಾಲೇಜಿನ ಆನ್‌ಲೈನ್ ಸ್ಕಾಲರ್‌ಶಿಪ್ ಪರೀಕ್ಷೆ ಫಲಿತಾಂಶ ಪ್ರಕಟ

ಸಂಪಾಜೆ ದರೋಡೆ ಪ್ರಕರಣದ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಸುಳ್ಯ ಪೊಲೀಸರು, ಸುಳ್ಯದಿಂದ ತಪ್ಪಿಸಿಕೊಂಡು ತಮಿಳುನಾಡಿನಲ್ಲಿ ಮಾರುವೇಷದಲ್ಲಿದ್ದ ಬೇಟೆಗಾರನ ಹಿಡಿದ ರಣಬೇಟೆಗಾರರು..!