ಕರಾವಳಿಕೊಡಗು

ಕಡಬ/ಮಡಿಕೇರಿ:ಭೀಕರ ರಸ್ತೆ ಅಪಘಾತ ; ಓರ್ವ ದುರಂತ ಅಂತ್ಯ; ಒಂದೇ ಕುಟುಂಬದ ಎಂಟು ಮಂದಿಗೆ ಗಾಯ

221

ನ್ಯೂಸ್ ನಾಟೌಟ್ : ಧರ್ಮಸ್ಥಳ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬದ ಮರ್ಧಾಳ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದೆ.ದುರಂತದಲ್ಲಿ ಓರ್ವ ಉಸಿರು ಚೆಲ್ಲಿದ್ದು, ಒಂದೇ ಕುಟುಂಬದ ಉಳಿದ ಎಂಟು ಜನರು ಗಾಯಗೊಂಡಿದ್ದಾರೆ.

ಸೋಮವಾರ ಪೇಟೆಯ ಪಟ್ಟಣದ ವರ್ತಕ, ಆಲೇಕಟ್ಟೆ ರಸ್ತೆಯ ನಿವಾಸಿ ಕೆಂಚುಮನೆ ರವಿ(53) ದುರಂತ ಅಂತ್ಯ ಕಂಡಿರುವ ವ್ಯಕ್ತಿ. ಇವರು ಕುಟುಂಬಸ್ಥರೊಂದಿಗೆ ಧರ್ಮಸ್ಥಳದಲ್ಲಿ ಪೂಜೆ ಮುಗಿಸಿಕೊಂಡು ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಸಂದರ್ಭ ಅಳೇರಿ ತಿರುವಿನಲ್ಲಿ ಎದುರಿನಿಂದ ಬಂದ ಕ್ರೇಟಾ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಓಮ್ನಿ ಚಲಾಯಿಸುತ್ತಿದ್ದ ರವಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಬಾರದ ಲೋಕಕ್ಕೆ ತೆರಳಿದ್ದಾರೆ.

ಅವರ ತಾಯಿ ಮಣಿಯಮ್ಮ, ಪತ್ನಿ ವಾಣಿ, ಪುತ್ರಿ ರಿಷಾ, ಪುತ್ರ ಶರಣ್, ಸಹೋದರ ಯೋಗೇಶ್, ಪತ್ನಿ ನೀತು, ಪುತ್ರಿ ನೇಹಾ, ಪುತ್ರ ಅಂಜನ್ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ರವಿ ಅವರು ಖಾಸಗಿ ಬಸ್ ನಿಲ್ದಾಣದಲ್ಲಿ ತಮ್ಮ ಸಹೋದರನೊಂದಿಗೆ ರಾಘವೇಂದ್ರ ಕ್ಯಾಂಟೀನ್ ನಡೆಸುತ್ತಿದ್ದರು.ಘಟನೆ ನಡೆದ ಸ್ಥಳಕ್ಕೆ ಕಡಬ ಪೋಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

See also  2 ಕೋಟಿ ರೂ. ನೋಟು, 50 ಲಕ್ಷ ರೂ. ನಾಣ್ಯಗಳಿಂದ ಗಣಪತಿಗೆ ಶೃಂಗಾರ; ಫೋಟೋಗಳಲ್ಲಿ ನೋಡಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget