ಕರಾವಳಿಕೊಡಗು

ಮಡಿಕೇರಿ:ನಡು ಪೇಟೆಯಲ್ಲಿಯೇ ಗಜರಾಜನ ಓಡಾಟಕ್ಕೆ ಜನರು ಶಾಕ್‌;ಆನೆಯ ಮಾರ್ನಿಂಗ್‌ ವಾಕಿಂಗ್‌ಗೆ ಬೆಚ್ಚಿಬಿದ್ದ ಪಟ್ಟಣದ ನಿವಾಸಿಗಳು

210

ನ್ಯೂಸ್‌ ನಾಟೌಟ್‌: ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಕಾಡುಪ್ರಾಣಿಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಜನರು ಓಡಾಡುವುದೇ ಕಷ್ಟವಾಗಿದೆ.ಇದೀಗ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಗಜರಾಜನ ಓಡಾಟಕ್ಕೆ ಜನರು ಶಾಕ್‌ (Elephant attack) ಆಗಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ಪಟ್ಟಣಕ್ಕೆ ಶನಿವಾರ ಬೆಳ್ಳಂಬೆಳಗ್ಗೆ ಮರಿ ಕಾಡಾನೆಯೊಂದು ಎಂಟ್ರಿ ಕೊಟ್ಟಿದೆ. ಕಾಡಾನೆಯ ಮಾರ್ನಿಂಗ್‌ ವಾಕಿಂಗ್‌ಗೆ ಪಟ್ಟಣದ ನಿವಾಸಿಗಳು ಬೆಚ್ಚಿಬಿದ್ದರು. ನ್ಯಾಯಾಲಯ ಆವರಣ, ತಾಲೂಕು ಕಚೇರಿ ಜತೆಗೆ ಅರಣ್ಯ ಕಾಲೇಜು ಕಡೆ ಎಲ್ಲ ಓಡಾಡಿದ ಕಾಡಾನೆಯು ಪೆಟ್ರೋಲ್ ಬಂಕ್ ಬಳಿ ಹೋಗಿದೆ. ಇತ್ತ ನಗರದಲ್ಲಿ ಆನೆ ಓಡಾಟ ಕಂಡ ಜನರು ಅಚ್ಚರಿಯಿಂದ ವಿಡಿಯೋ ಸೆರೆ ಹಿಡಿಯುತ್ತಿರುವ ದೃಶ್ಯ ಕಂಡು ಬಂತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆಯನ್ನು ಪುನಃ ವಾಪಸ್‌ ಕಳಿಸಲು ಹರಸಾಹಸ ಪಟ್ಟರು. ಜನರು ಹೊರಗೆ ಓಡಾಡುವಾಗ ಎಚ್ಚರವಾಗಿ ಇರುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

See also  ಉಪ್ಪಿನಂಗಡಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ,ಮುಸ್ಲಿಂ ವಿದ್ಯಾರ್ಥಿಗಳ ಜೋಡಿಯನ್ನು ತಡೆಹಿಡಿದು ಹಲ್ಲೆಗೆ ಯತ್ನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget