ಸೋಮವಾರಪೇಟೆ: ಇಲ್ಲಿನ ಸರಕಾರಿ ವೈದ್ಯಾಧಿಕಾರಿ ರವೀಂದ್ರನ್ ಚಿಲಾಕುಂದ ಬಳಿ ನಡೆದ ಕಾರು ಅಪಘಾತದಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವುದಕ್ಕಾಗಿ ಸೋಮವಾರಪೇಟೆ ಕಡೆಗೆ ಬರುತ್ತಿದ್ದ ಸಂದರ್ಭ ಕಾರು ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇವರು ಚಲಾಯಿಸುತ್ತಿದ್ದ ಮಾರುತಿ 800 ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಜೊತೆಯಲ್ಲಿ ಇದ್ದ ಸಹೋದರಿಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ ನಲ್ಲಿದ್ದ ಪತ್ನಿ ಮಗು ಅಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್ ನಿಂದ ತಾಯಿಯನ್ನು ರವೀಂದ್ರನ್ ಕಳೆದುಕೊಂಡಿದ್ದರು.
previous post