ನ್ಯೂಸ್ ನಾಟೌಟ್: ಭಾರಿ ಅಬ್ಬರದಿಂದ ಸುರಿದ ಮಳೆಗೆ ಕರಾವಳಿ, ಕೊಡಗು ಸೇರಿದಂತೆ ರಾಜ್ಯದ ವಿವಿಧ ಕಡೆ ಇಳೆ ತಂಪಾಗಿದೆ. ಈ ಮಳೆ ಮೇ 4ರಂದು ಕೂಡ ಸುರಿಯುವ ಸಾಧ್ಯತೆ ಇದೆ.
ಕೊಡಗಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಉಳಿದಂತೆ ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಉಳಿದಂತೆ ಕರಾವಳಿಯಲ್ಲಿ ಬಿಸಿಲಿನ ತಾಪ ಹೆಚ್ಚಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ ಹೀಟ್ ವೇವ್ ಎದುರಾಗಲಿದೆ ಎಂದು ತಿಳಿಸಲಾಗಿದೆ.