ಕೊಡಗು

ಕೊಡಗು : ಪಶು ಇಲಾಖೆಯಲ್ಲಿರುವ ಖಾಲಿ ಹುದ್ದೆಗಳಿಗೆ ಇನ್ನೂ ನೇಮಕಾತಿಯೇ ಆಗಿಲ್ಲ..!

ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯಲ್ಲಿ ಪಶುಗಳಿಗಿಂತ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯೇ ಸಮಸ್ಯೆಗಳಿಂದ ಬಳಲುತ್ತಿದೆ. ಪಶು ಆಸ್ಪತ್ರೆಗಳು ಇದ್ದರೂ ಕೂಡಾ ವೈದ್ಯರ ಮತ್ತು ಸಿಬ್ಬಂದಿ ಸಮಸ್ಯೆ ಕಾಡುತ್ತಿದೆ. ಜನರು ತುಂಬಾ ಕಷ್ಟಕೊಳಗಾಗಿದ್ದಾರೆ. ಪಶುಗಳಿಗೆ ಕಾಯಿಲೆಗಳು ಉಲ್ಬಣಿಸಿದರೆ ನಿಭಾಯಿಸಲು ಕಷ್ಟವಾಗಿದೆ ಅನ್ನುವುದು ಜನರ ಆಕ್ರೋಶವಾಗಿದೆ.

ಪಶು ವೈದ್ಯ ಆಸ್ಪತ್ರೆಗಳಿದ್ದರೂ ಸಿಬ್ಬಂದಿ ಇಲ್ಲ

ಇತ್ತೀಚಿನ ದಿನಗಳಲ್ಲಿ  ಕಾಲು ಬಾಯಿ ,ಚರ್ಮ ರೋಗಗಳ ಭಯ ಬೀತಿ ಕಂಡಿದೆ. ಈ  ವೇಳೆ ಸುಮಾರು ೯೩,೫೩೮ ರಾಸುಗಳಿವೆ. ಇವುಗಳಿಗೆ ೫೦ ವೈದ್ಯರು ಬೇಕಾಗಿದ್ದಾರೆ. ಆದರೆ ಇರುವುದು ಬರೀ ೧೮ ವೈದ್ಯರುಗಳು , ಜಾನುವಾರು ಅಭಿವೃದ್ಧಿ ಅಧಿಕಾರಿ ೫ ಮಂದಿ ಇರಬೇಕಿದ್ದಲ್ಲಿ ಕೇವಲ ಎರಡು ಮಂದಿ ,ಹಿರಿಯ ಪಶು ವೈದ್ಯ ಪರೀಕ್ಷಕರು ೩೭ ಬೇಕಾದಲ್ಲಿ ೧೭ ಮಂದಿ , ಕಿರಿಯ ಪಶು ವೈದ್ಯರು ೪೩ ಬೇಕಾದಲ್ಲಿ ೨ ಮಂದಿ,ಹಾಗೂ ೧೧೮  ಡಿ ದರ್ಜೆ ನೌಕರರು ಬೇಕಾದಲ್ಲಿ ಕೇವಲ ೧೭ ಮಂದಿ ಮಾತ್ರ ಇದ್ದಾರೆ. ಕೊಡಗಿನಾದ್ಯಂತ ವ್ಯಾಪಕ ತೊಂದರೆಯಾಗಿದೆ.  ಇಷ್ಟು ಪ್ರಮಾಣದ ಕೊರತೆಯ ನಡುವೆ  ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕುತ್ತಿದೆ . ಚರ್ಮಗಂಟು ರೋಗಕ್ಕೆ ೧೦ ಸಾವಿರ ಡೋಸ್ ಬಂದಿದೆ. 

Related posts

ಮಡಿಕೇರಿ:ಜಾಗದ ವಿಷಯದಲ್ಲಿ ತಕರಾರು, ವಕೀಲ-ಮಹಿಳೆ ಮಧ್ಯೆ ಬೀದಿ ರಂಪಾಟ

ಕೊಡವ ಧಿರಿಸಿನಲ್ಲಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ

ಮಡಿಕೇರಿ: ಶಾಲೆಯ ಬೀಗ ಒಡೆದು ಅನೈತಿಕ ಚಟುವಟಿಕೆಯ ಶಂಕೆ! ಬಟ್ಟೆ , ಸಿಗರೇಟ್ ತುಂಡುಗಳು ಪತ್ತೆ !