ನ್ಯೂಸ್ ನಾಟೌಟ್: ದಿನದ ಮೊದಲ ಪಂದ್ಯಾಟದಲ್ಲಿ ಬುಧವಾರ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಾಫಿ ಕ್ರಿಕೆಟರ್ಸ್ ನಿಗದಿತ 10 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದರು. ತಂಡದ ಪ್ರಮುಖ ಆಟಗಾರ ಅನಿಲ್ ಕುಡೆಕಲ್ 11 ಬೌಂಡರಿ ಮತ್ತು 3 ಸಿಕ್ಸರ್ ಗಳ ಸಹಾಯದೊಂದಿಗೆ 76 (34) ರನ್ ಗಳಿಸಿದರು. ಈ ಮೂಲಕ ನಿನ್ನೆಯ ಪಂದ್ಯಾಟದಲ್ಲಿ ಕೀಜನ ಯತೀಶ್ ಅವರು ಗಳಿಸಿದ ಅತ್ಯಧಿಕ 53 ರನ್ ಗಳ ದಾಖಲೆಯನ್ನು ಅನಿಲ್ ಕುಡೆಕಲ್ ತಮ್ಮ ಖಾತೆಗೆ ವರ್ಗಾಯಿಸಿಕೊಂಡರು.
ಕೋಡಿ ಹರ್ಷ 3 ವಿಕೆಟ್ ಕಬಳಿಸುವ ಮೂಲಕ ಯಶಸ್ವೀ ಬೌಲರ್ ಎನಿಸಿದರು. ನಂತರ ಬ್ಯಾಟ್ ಮಾಡಿದ ಜಿ.ಕಿಂಗ್ಸ್ 10 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಸೋಲೊಪ್ಪಿಕೊಂಡರು. ತೊತ್ತಿಯನ ರಾಕೇಶ್ 4 ಬೌಂಡರಿ 1 ಸಿಕ್ಸರ್ ಮೂಲಕ 26(20) ರನ್ ಗಳಿಸಿದರು. ಜಯಪ್ರಕಾಶ್ ಮಾವಾಜಿ 3 ವಿಕೆಟ್ ಪಡೆದು ಗಮನ ಸೆಳೆದರು. ಅನಿಲ್ ಕುಡೆಕಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದರು.
ಶನಿವಾರ ನಡೆಯುವ ಪಂದ್ಯ (9AM)ಕ್ವಾಲಿಫಯರ್ ವನ್ ಪಂದ್ಯದಲ್ಲಿ ಟೀಮ್ ಎಲೈಟ್ ತಂಡವನ್ನು ಕಾಫಿ ಕ್ರಿಕೆಟರ್ಸ್ ಎದುರಿಸಲಿದೆ. ಇದರಲ್ಲಿ ಗೆದ್ದವರು ನೇರವಾಗಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯುತ್ತಾರೆ. (11.30am)ಎಲಿಮಿನೇಟರ್ ಪಂದ್ಯದಲ್ಲಿ MCB ತಂಡವನ್ನು ಟೀಮ್ ಭಗವತಿ ಎದುರಿಸಲಿದೆ ಎಂದು ವರದಿ ತಿಳಿಸಿದೆ.