ಕರಾವಳಿ

ಮರದ ಕೊಂಬೆ ಹಿಡಿದು ಹತ್ತು ಜನರ ಜೀವ ಉಳಿಸಿದ ಬೋಟ್ ಚಾಲಕ

ನ್ಯೂಸ್ ನಾಟೌಟ್: ಉಕ್ಕಿ ಹರಿಯುವ ಕಾವೇರಿ ನದಿಯ ರಭಸಕ್ಕೆ ಸಿಲುಕಿದ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬೋಟ್ ತಾಂತ್ರಿಕ ಕಾರಣಗಳಿಂದ ಎಂಜಿನ್ ಆಫ್ ಆಗಿ ಇನ್ನೇನು ಕಣ್ಣೆದುರಿಗೆ ಕೊಚ್ಚಿ ಹೋಗುವ ಸ್ಥಿತಿಯಲ್ಲಿತ್ತು. ಆದರೆ ಬೋಟ್ ಚಾಲಕ ಸಾಹಸ ಮೆರೆದು ಮರದ ಕೊಂಬೆಯನ್ನು ಬಲವಾಗಿ ಹಿಡಿದುಕೊಂಡು ಪ್ರವಾಹಕ್ಕೆ ಸೆಡ್ಡು ಹೊಡೆದು ನಿಂತರು. ಹೀಗೆ ಸುಮಾರು ಅರ್ಧ ಗಂಟೆ ಬೋಟ್ ಅನ್ನು ಹಿಡಿದು ನಿಲ್ಲಿಸಿದ್ದರಿಂದ ಭಾರಿ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಿರುವ ಘಟನೆ ಶನಿವಾರ ಸಂಜೆ ವೇಳೆಗೆ ಕುಶಾಲನಗರದ ದುಬಾರೆ ಎಂಬಲ್ಲಿ ನಡೆದಿದೆ.

ಏನಿದು ಘಟನೆ?

ದುಬಾರೆಯ ಆನೆ ಕ್ಯಾಂಪ್ ನಿಂದ ಹಾಡಿ ಜನರನ್ನು ಕರೆದುಕೊಂಡು ಬೋಟ್ ವೊಂದು ತೆರಳುತ್ತಿತ್ತು, ಕಾವೇರಿ ನದಿಯ ನೀರಿನ ಮಟ್ಟ ಅಪಾಯದ ಸ್ಥಿತಿಯಲ್ಲಿದ್ದರೂ ಬೋಟ್ ನೀರನ್ನು ಸೀಳಿಕೊಂಡು ಮುಂದಕ್ಕೆ ಚಲಿಸುತ್ತಿತ್ತು. ಇದ್ದಕ್ಕಿದ್ದಂತೆ ಬೋಟ್ ಆಫ್ ಆಗಿದೆ. ಅತ್ತ ಮುಂದಕ್ಕೂ ಹೋಗಲಾಗದೆ ಇತ್ತ ಹಿಂದಕ್ಕೂ ಹೋಗಲಾಗದ ಸ್ಥಿತಿ ನಿರ್ಮಾಣವಾಯಿತು. ಬೋಟ್ ನೊಳಗಿದ್ದವರು ಗಾಬರಿಯಿಂದ ಕಿರುಚಲು ಶುರು ಮಾಡಿದರು. ಇನ್ನೇನು ಬೋಟ್ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಧೃತಿಗೆಡದ ಬೋಟ್ ಚಾಲಕ ಅಲ್ಲೆ ಪಕ್ಕದಲ್ಲಿದ್ದ ಗಿಡದ ರೆಂಬೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದಾರೆ. ಅರ್ಧಗಂಟೆಯಾದ ನಂತರ ಬೋಟ್ ಅನ್ನು ರಕ್ಷಣಾ ಸಿಬ್ಬಂದಿ ಬಂದು ರಕ್ಷಿಸಿದರು.

Related posts

ಇಬ್ಬರು ಯುವಕರ ಶವ ಪತ್ತೆ, ಗೊಂದಲಗಳಿಗೆ ತೆರೆ

ಮಾಲ್‌ನಲ್ಲಿ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಿಯ ಗುರುತು ಪತ್ತೆ ಹಚ್ಚಿದ ಪೊಲೀಸರಿಗೆ ಕಾದಿತ್ತು ಶಾಕ್! ಆತ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದನಾ..?

ಕುಂಬ್ರ: ಓವರ್‌ ಟೇಕ್ ಮಾಡುವ ಭರದಲ್ಲಿ ಆಂಬ್ಯುಲೆನ್ಸ್ ಗೆ ಗುದ್ದಿದ ಕಂಟೈನರ್..! 5 ಮಂದಿಗೆ ಗಾಯ..!