ಕರಾವಳಿಕೊಡಗುಕ್ರೈಂ

ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣಗೆ ಲಕ್ಷ..ಲಕ್ಷ ರೂ. ಪಂಗನಾಮ ಹಾಕಿದ ಮ್ಯಾನೇಜರ್‌..! ರೊಚ್ಚಿಗೆದ್ದ ನಟಿ ಮಾಡಿದ್ದೇನು ಗೊತ್ತಾ?

331

ನ್ಯೂಸ್ ನಾಟೌಟ್: ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿ ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೊದ ಮೊದಲು ನಟಿಸಲು ಅವಕಾಶ ಪಡೆದುಕೊಂಡಿದ್ದ ನಟಿ ಈಗ ಪರಭಾಷಾ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ನಟಿಗೆ ತನ್ನ ನಂಬಿಕಸ್ಥ ವ್ಯಕ್ತಿಯಿಂದಲೇ ಲಕ್ಷಗಟ್ಟಲೆ ರೂ. ವಂಚನೆಯಾಗಿದೆ ಎನ್ನುವ ಸುದ್ದಿಗಳು ಕೇಳಿ ಬಂದಿವೆ.

ನಟಿಗೆ ತನ್ನ ನಂಬಿಕಸ್ಥ ಮ್ಯಾನೇಜರ್ ಮೋಸ ಮಾಡಿದ್ದಾರಂತೆ. ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ ನಿಂದ 80 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ನಟಿ ರಶ್ಮಿಕಾ ಮಂದಣ್ಣ, ತನ್ನ ಮ್ಯಾನೇಜರ್ ನನ್ನು ಕೆಲಸದಿಂದ ತೆಗೆದುಹಾಕಿದ್ದಾರಂತೆ. ಮ್ಯಾನೇಜರ್ ಮೋಸ ಮಾಡಿದ ಬಳಿಕ ಆ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಲಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ. ಆದರೆ ಈ ಸುದ್ದಿ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. ಸದ್ಯ ಕನ್ನಡ ಸಿನಿಮಾಗಳಿಂದ ದೂರವಿರುವ ನಟಿ ರಶ್ಮಿಕಾ ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಬಹಳಷ್ಟು ಬೇಡಿಕೆಯನ್ನು ಹೊಂದಿದ್ದಾರೆ. ಆ ಇಂಡಸ್ಟ್ರಿಗಳ ಕಡೆಯಲ್ಲಿಯೇ ಬ್ಯುಸಿಯಾಗಿದ್ದಾರೆ.

See also  ರಜತ್, ವಿನಯ್‌ ಇಂದು(ಮಾ.25) ಮತ್ತೆ ಪೊಲೀಸ್ ವಶಕ್ಕೆ..! ಸಾಕ್ಷ್ಯ ನಾಶದಡಿ ಮತ್ತೆ ಪ್ರಕರಣ ದಾಖಲಾಗುತ್ತಾ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget