Latestಕ್ರೈಂವಿಡಿಯೋವೈರಲ್ ನ್ಯೂಸ್

ಚಾಕು ನುಂಗಿ ಒದ್ದಾಡಿದ ನಾಗರ ಹಾವು..! ಹಾವನ್ನು ರಕ್ಷಿಸಿದ್ದೇ ರೋಚಕ..!

498

ನ್ಯೂಸ್ ನಾಟೌಟ್: ನಾಗರಹಾವು ಇಲಿ, ಕೋಳಿ ಮೊಟ್ಟೆಗಳ ನುಂಗುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಹಾವು ಆಹಾರ ಎಂದು ಭಾವಿಸಿ, ಒಂದು ಅಡಿ ಉದ್ದದ ಕಬ್ಬಿಣದ ಚಾಕು ನುಂಗಿದ್ದು, ನಂತರ ಅದು ಜೀರ್ಣವಾಗದೆ, ಹೊರಕ್ಕೂ ಹಾಕಲಾಗದೆ ವಿಲವಿಲ ಒದ್ದಾಡಿದ ವಿಚಿತ್ರ ಘಟನೆಯೊಂದು ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ನಡೆದಿದೆ.

ಕುಮಟಾ ಪಟ್ಟಣದಿಂದ ಸುಮಾರು 5 ಕಿಮೀ ದೂರದಲ್ಲಿರುವ ಹೆಗಡೆ ಗ್ರಾಮದ ರೈತ ಗೋವಿಂದ ನಾಯಕ್ ಮನೆಯಲ್ಲಿ ಈ ಘಡನೆ ನಡೆದಿದೆ.

ಅಡುಗೆ ಮನೆಯೊಳಗಿನ ಕಿಟಕಿಯ ಬಳಿ ಚಾಕು ಇಡಲಾಗಿತ್ತು. ಚಾಕು ಹೊರಗಿ ಬಿದ್ದಿತ್ತು. ಬಳಿಕ ಅಲ್ಲಿ ಹಾವು ಓಡಾಡುತ್ತಿರುವುದನ್ನು ಕಂಡ ಮನೆಯವರು ಸ್ಥಳಕ್ಕೆ ಹೋಗಲು ಹೆದರಿದ್ದರು. ಕೆಲ ಸಮಯದ ಬಳಿಕ ಸ್ಥಳದಲ್ಲಿ ನೋಡಿದಾಗ ಚಾಕು ಇರಲಿಲ್ಲ. ಆದರೆ, ಹಾವು ಮಾತ್ರ ಏನೋ ತಿಂದು ವಿಶ್ರಾಂತ ಸ್ಥಿತಿಯಲ್ಲಿರುವಂತೆ ಕಂಡುಬಂದಿತ್ತು.

ಬಳಿಕ ಹಾವು ಹೋಗಲಿ ಎಂದು ಕೆಲ ಹೊತ್ತು ಸಮಯ ಕಾದರೂ, ಅದು ಕದಲಿರಲಿಲ್ಲ. ಚಾಕು ಇಲ್ಲದಿರುವುದನ್ನು ನೋಡಿ ಅನುಮಾನಿಸಿ ಉರಗ ತಜ್ಞ ಪವನ್ ನಾಯ್ಕ ಅವರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದು ಪರಿಶೀಲಿಸಿದ ಪವನ್, ಹಾವು ಚಾಕು ನುಂಗಿರುವುದನ್ನು ಖಚಿತಪಡಿಸಿಕೊಂಡರು. ಒಂದು ಅಡಿ 2 ಇಂಚು ಉದ್ದ ಇದ್ದ ಚಾಕುವಿನ ತುದಿ ಹಾವಿನ ಎದೆಯ ಹತ್ತಿರ ಸಿಲುಕಿತ್ತು. ಅದನ್ನು ಹೊರಹಾಕಲು ಹಾವು ಒಡ್ಡಾಡುತ್ತಿರುವುದು ಕಂಡುಬಂದಿತ್ತು. ಪವನ್ ಎಂಬವರು, ಪಶು ಆಸ್ಪತ್ರೆಯ ಸಹಾಯಕ ಅದ್ವೈತ ಭಟ್ ಎಂಬವರ ಮನೆಗೆ ಹಾವನ್ನು ಕೊಂಡೊಯ್ದುರು.

ಪವನ್ ಹಾವಿನ ಬಾಯಿ ತೆರೆದಿದ್ದು, ಅದ್ವೈತ ಭಟ್ ಫೋರ್ಸ್‌ಪ್ಸ್ ಮೂಲಕ ಚಾಕುವನ್ನು ಹೊರತೆಗೆಯಲು ಮುಂದಾದರು. ಇದರಂತೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಪ್ರಯತ್ನದ ಮೂಲಕ ಚಾಕುವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು.

ಮರದ ಬುಡದಿಂದ ಚಿಮ್ಮಿದ ನೀರು ಕಂಡು ಹೂವು, ಅರಶಿನ ಹಾಕಿ ಪೂಜೆ ಮಾಡಿದ ಜನರು..! ಅಸಲಿ ವಿಷಯವೇ ಬೇರೆಯಾಗಿತ್ತು..!

See also  ಸಾಮಾಜಿಕ ಜಾಲತಾಣದಲ್ಲಿ ಮೊದಲ ರಾತ್ರಿಯ ಪೋಟೋಗಳನ್ನು ಹರಿಬಿಟ್ಟ ಜೋಡಿ..! ನೆಟ್ಟಿಗರಿಂದ ಭಾರೀ ಟೀಕೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget