ಕ್ರೈಂ

ಮಂಗಳೂರು: ಬೆನ್ನಿಗೆ ಚೂರಿ ಹಾಕಿ ದುಷ್ಕರ್ಮಿಗಳ ತಂಡ ಎಸ್ಕೇಪ್‌..!

242
Spread the love

ಮಂಗಳೂರು: ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ತಡರಾತ್ರಿ ಮಾಲೆಮಾರ್ ಬಳಿ ಸಂಭವಿಸಿದೆ. ಪಂಜಿಮೊಗರು ನಿವಾಸಿ ರಾಜೇಶ್ (45) ಗಾಯಗೊಂಡವರು. ಇವರು ಕೊಟ್ಟಾರದಿಂದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಮಾಲೆಮಾರ್ ಬಳಿ ದುಷ್ಕರ್ಮಿಗಳ ತಂಡ ಬೆನ್ನಿಗೆ ಚೂರಿಯಿಂದ ಇರಿದಿದ್ದಾರೆ. ರಾಜೇಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಾವೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಸುಳ್ಯ: ಕುದ್ಪಾಜೆಯ 20 ಮನೆಗಳನ್ನು ಶನಿವಾರದಿಂದ ಕಗ್ಗತ್ತಲಿನಲ್ಲಿರಿಸಿದ ಮೆಸ್ಕಾಂ..!, ಸುಳ್ಯ, ಮಂಗಳೂರಿಗೆ ದೂರು ಕೊಟ್ಟರೂ ಪ್ರಯೋಜನವಿಲ್ಲ..! ಎಂಥಾ ಅವಸ್ಥೆ ಮಾರಾಯೆರೇ..!
  Ad Widget   Ad Widget   Ad Widget