ನ್ಯೂಸ್ ನಾಟೌಟ್: ಬಾಲಿವುಡ್ ಬೆಡಗಿ ಅಥಿಯಾ ಶೆಟ್ಟಿ ಅವರು ಪತಿ ಕೆ.ಎಲ್ ರಾಹುಲ್ ಹುಟ್ಟುಹಬ್ಬದಂದೇ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಮಗಳಿಗೆ ವಿಭಿನ್ನವಾಗಿರುವ ಎಂದು ಹೆಸರನ್ನು ಇಟ್ಟು ಸಂಭ್ರಮಿಸಿದ್ದಾರೆ.
ಕೆ.ಎಲ್ ರಾಹುಲ್‌ಗೆ (ಏ.18) 33ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಮಗಳೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ನಮ್ಮ ಹೆಣ್ಣು ಮಗು, ನಮ್ಮ ಸರ್ವಸ್ವ, ‘ಇವಾರಾ’ ಎಂದು ನಟಿ ಅಥಿಯಾ ಶೆಟ್ಟಿ ಬರೆದುಕೊಂಡಿದ್ದಾರೆ. ಫೋಟೋ ಶೇರ್ ಮಾಡಿದ್ರು ಕೂಡ ಮಗಳ ಮುಖವನ್ನು ಅವರು ರಿವೀಲ್ ಮಾಡಿಲ್ಲ.ಅಥಿಯಾ ದಂಪತಿ ಪುತ್ರಿಗೆ ʻಇವಾರಾ’ ಎಂದು ವಿಭಿನ್ನವಾಗಿರೋ ಹೆಸರಿಟ್ಟಿದ್ದು, ಇವಾರಾ ಎಂದರೆ ‘ದೇವರ ಉಡುಗೊರೆ’ ಎಂದರ್ಥ ಬರುತ್ತದೆ.
ಇಂತಹ ಸುಂದರವಾದ ಸಂಸ್ಕೃತ ಹೆಸರನ್ನು ಅಥಿಯಾ ಶೆಟ್ಟಿ ಜೋಡಿ ಮಗಳಿಗೆ ಇಟ್ಟಿದ್ದಾರೆ. ಅಥಿಯಾ ಅಜ್ಜಿಯ ಹೆಸರು ವಿಫುಲ ಆಗಿದೆ. ಅವರ ಗೌರವಾರ್ಥವಾಗಿ ಮಧ್ಯದ ಹೆಸರು V ಹಾಗೂ ರಾಹುಲ್ ಹೆಸರಲ್ಲಿ Rah ಹೆಸರನ್ನು ಸೇರಿಸಿ ಮಗಳಿಗೆ (Evaarah) ಇಟ್ಟಿರೋದು ವಿಶೇಷ. ಇನ್ನೂ ಅಥಿಯಾ ಪೋಸ್ಟ್‌ಗೆ ಸಮಂತಾ, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಹಾರ್ಟ್ ಎಮೋಜಿ ಹಾಕಿ ವಿಶ್ ಮಾಡಿದ್ದಾರೆ.