ಕ್ರೈಂ

ಕಿಸ್ ಕೊಡು…ಬೇಗ ಕಿಸ್ ಕೊಡು ವಿದ್ಯಾರ್ಥಿನಿಗೆ ಪೋಲಿ ಮಾಸ್ತರ್ ಪಾಠ..!

ರಾಣೆಬೆನ್ನೂರು: ಪಾಠ ಮಾಡಬೇಕಾದ ಶಿಕ್ಷಕ ಪೋಲಿಯಾಟ ಆಡಲು ಹೋಗಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಹೈಸ್ಕೂಲ್ ನಲ್ಲಿ ಪಾಠ ಮಾಡುತ್ತಿದ್ದ ಮಲ್ಲಪ್ಪ ತಳವಾರ ಎಂಬ ಶಿಕ್ಷಕ ವಿದ್ಯಾರ್ಥಿನಿಯರಿಗೆ ಕಿಸ್ ಕೊಡಿ ಎಂದು ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ಹೈಸ್ಕೂಲ್ ವಿದ್ಯಾರ್ಥಿನಿಗೆ ಆನ್ ಲೈನ್ ಕ್ಲಾಸ್ ಹೇಳುತ್ತಿದ್ದ ಶಿಕ್ಷಕ ಸುಮಾರು ಒಂದು ವರ್ಷದ ಹಿಂದೆ ನಂಬರ್ ಪಡೆದುಕೊಂಡು ಪೀಡಿಸುತ್ತಿದ್ದ. ಕಾಮುಕ ಶಿಕ್ಷಕ ಪ್ರತಿನಿತ್ಯ ಚಾಟ್ ಮಾಡುತ್ತ ಮಾತೆತ್ತಿದರೆ ಕಿಸ್ ಕೊಡು ಎಂದು ಸಂದೇಶ ಕಳುಹಿಸಿದ ಪೋಲಿ ಮಾಸ್ತರ್ ನ ಚಾಟಿಂಗ್ ಸ್ಕ್ರೀನ್ ಶಾರ್ಟ್ ಗಳು ವೈರಲ್ ಆಗಿದ್ದು ಸದ್ಯ ಕಾಮುಕ ಶಿಕ್ಷಕನನ್ನು ಬಂಧಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

Related posts

ಈ ಮಾಲ್‌ ನಲ್ಲಿ ವಾಶ್ ರೂಮ್ ಬಳಸಲು 1000 ರೂ. ಶಾಪಿಂಗ್ ಕಡ್ಡಾಯ..! ಈ ಬಗ್ಗೆ ಗ್ರಾಹಕ ಹೇಳಿದ್ದೇನು..?

ಮಂಗಳೂರು: ಈದ್ ಮಿಲಾದ್ ನಂದು ಹಿಂದೂ ಮೀನು ವ್ಯಾಪಾರಿಗಳು ಮಾರಾಟ ಮಾಡಬಾರದೇ? ಕಡ್ಡಾಯ ರಜೆ ತೆಗೆದುಕೊಳ್ಳುವಂತೆ ಮೀನು ವ್ಯಾಪಾರಸ್ಥ ಸಂಘ ಹೇಳಿದ್ದೇಕೆ? ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಹೇಳಿದ್ದೇನು?

ಹುಡುಗಿಗಾಗಿ ಮನೆ ಮೇಲೆ ಯುವಕರ ದಾಳಿ..! ತಡರಾತ್ರಿ ಮನೆ, ವಾಹನಗಳ ಮೇಲೆ ಕಲ್ಲು ತೂರಾಟ..!