ಕರಾವಳಿ

ಮಹಿಳೆಯೊಂದಿಗೆ ವೈದ್ಯನ ಅಸಭ್ಯ ವರ್ತನೆ,  ಇದೀಗ ವೈದ್ಯನ ಮೃತ ದೇಹವೇ ಪತ್ತೆ

ವರದಿ: ರಸಿಕಾ ಮುರುಳ್ಯ

ನ್ಯೂಸ್ ನಾಟೌಟ್: ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿ ತಲೆಮರೆಸಿಕೊಂಡಿದ್ದ ವೈದ್ಯನ ಮೃತದೇಹ ಪತ್ತೆಯಾಗಿದೆ.

ಕಾಸರಗೋಡಿನ ಬದಿಯಡ್ಕದ ದಂತ ವೈದ್ಯರಾದ ಡಾ. ಎಸ್ ಕೃಷ್ಣ ಮೂರ್ತಿ (57)  ಕೆಲವು ದಿನಗಳ ಹಿಂದೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇತ್ತ ಪೊಲೀಸರ ತನಿಖೆ ನಡೆಯುತ್ತಿರುವಾಗಲೇ ಡಾ. ಎಸ್ ಕೃಷ್ಣ ಮೂರ್ತಿ ಪರಾರಿಯಾಗಿದ್ದರು, ಇವರಿಗಾಗಿ ಹುಡುಕಾಟ ಮುಂದುವರಿದಿತ್ತು. ಆದರೆ ಇದೀಗ ಅವರ ಮೃತದೇಹ ಪತ್ತೆಯಾಗಿದೆ. ಸ್ವಂತ ಕ್ಲಿನಿಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ  ವೈದ್ಯ  ಬೈಕ್ ಅನ್ನು ಕುಂಬಳೆ ಪೇಟೆಯಲ್ಲಿ ಬಿಟ್ಟಿದ್ದರು. ಅಲ್ಲದೆ ಮೊಬೈಲ್ ಅನ್ನು ಕ್ಲಿನಿಕ್ ನಲ್ಲೆ ಬಿಟ್ಟು ಹೋಗಿದ್ದರು. ವೈದ್ಯರಿಗೆ ಮಹಿಳೆಯ ಮನೆಯವರು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ಪರಾರಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇದೀಗ ಕುಂದಾಪುರದಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಂಗಳೂರು: ಆಧಾರ್ ತಿದ್ದುಪಡಿಗೆಂದು ಮನೆಯಿಂದ ತೆರಳಿದಾಕೆ ನಾಪತ್ತೆ..! ಪತಿ ನೀಡಿದ ದೂರಿನಲ್ಲೇನಿದೆ..?

ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಗೊಳ್ಳುವ ಮೊದಲೇ ತನಿಖೆಗೆ ಒಪ್ಪಿಸಿ ಕಾಂಗ್ರೆಸ್ ನಿಂದ ನಾಟಕ, ಶಾಸಕ ವಿ. ಸುನಿಲ್‌ ಕುಮಾರ್‌ ವಾಗ್ದಾಳಿ

ಸುಳ್ಯ: ವೃತ್ತ ನಿರೀಕ್ಷಕ ಮೋಹನ್ ಕೊಠಾರಿ ವರ್ಗಾವಣೆ..!, ಸೆ.25ರಂದು ಅಧಿಕಾರ ಸ್ವೀಕರಿಸಿದ್ದ ಸರ್ಕಲ್ ಇನ್ಸ್ ಪೆಕ್ಟರ್ ವರ್ಗಾವಣೆಯಾಗಿದ್ದೆಲ್ಲಿಗೆ?