ವೈರಲ್ ನ್ಯೂಸ್

Kingfisher: ಬಿಯರ್​ ಪ್ರಿಯರಿಗೆ ಆಘಾತ, ಕಿಂಗ್‌ ಪಿಶರ್ ಬಿಯರ್‌ನಲ್ಲಿ ವಿಷಕಾರಿ ಅಂಶ ಪತ್ತೆ, 25 ಕೋಟಿ ರೂ. ಮೌಲ್ಯದ 78,678 ಬಾಕ್ಸ್ ಬಿಯರ್ ಅಬಕಾರಿ ಪೊಲೀಸರ ವಶಕ್ಕೆ

180

ನ್ಯೂಸ್ ನಾಟೌಟ್: ಬಿಯರ್​ ಪ್ರಿಯರಿಗೆ ಆಘಾತಕಾರಿ ವಿಚಾರವೊಂದು ಹೊರ ಬಿದ್ದಿದೆ. ಪ್ರತಿಷ್ಠಿತ ಕಿಂಗ್​ ಫಿಶರ್ (Kingfisher) ಬಿಯರ್​ನಲ್ಲಿ ವಿಷಕಾರಿ ಅಂಶ (Toxic Content) ಪತ್ತೆಯಾಗಿದೆ. ಈ ಬಗ್ಗೆ ಇದೀಗ ಅಬಕಾರಿ ಇಲಾಖೆ (Department of Excise) ಅಧಿಕಾರಿಗಳು ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಂಜನಗೂಡು (Nanjangud) ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರಿವರಿಸ್ ಕಂಪನಿಯ ಘಟಕದಲ್ಲಿ ತಯಾರಾಗಿದ್ದ ಬಿಯರ್​ ಬಾಟಲಿಗಳಲ್ಲಿ ಅಪಾಯಕಾರಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಪರಿಣಾಮ 25 ಕೋಟಿ ರೂ. ಮೌಲ್ಯದ 78,678 ಬಾಕ್ಸ್ ಬಿಯರ್ ಅನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. 15-07-23ರಂದು ಬಾಟಿಲಿಂಗ್ ಆದ 7e ಮತ್ತು 7c ನಮೂನೆಯ ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಕಂಡುಬಂದಿದೆ. ವಿಷಯ ತಿಳಿದ ಅಧಿಕಾರಿಗಳು, ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ಕುರಿತು 02-08-2023ರಂದು ರಸಾಯನಿಕ ಪರೀಕ್ಷೆಯ ವರದಿ ಬಂದಿದ್ದು, ವರದಿಯಲ್ಲಿ ಮಾನವ ಸೇವನೆಗೆ ಯೋಗ್ಯವಲ್ಲ ಎಂದು ಉಲ್ಲೇಖಿಸಲಾಗಿದೆ.

ಈ ಅವಧಿಯಲ್ಲಿ ಒಟ್ಟು‌ 78,678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಈ ಹೊತ್ತಿಗೆ ಎಲ್ಲಾ ಪೆಟ್ಟಿಗೆಗಳು ತಡೆಹಿಡಿಯಲ್ಪಟ್ಟಿವೆ. ಕೆಲ ಡಿಪೋದಿಂದ ಅಂಗಡಿಗಳಿಗೂ ವಿತರಣೆಯಾಗಿತ್ತು. ರಿಟೈಲ್ ನಲ್ಲೂ ಸೇಲ್ ಆಗದಂತೆ ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣಕ್ಕಾಗಿ ಕಂಪನಿ ವಿರುದ್ಧ ಅಬಕಾರಿ ಕಾಯ್ದೆಯಡಿ ಎಫ್ ಐಆರ್ ದಾಖಲು ಮಾಡಲಾಗಿದೆ.

ನಿಗದಿತ ಅವಧಿಯೊಳಗೆ ತಯಾರಾದ ಕಿಂಗ್ ಫಿಶರ್ ಬಿಯರ್ ನಲ್ಲಿ ಅಪಾಯಕಾರಿ ಅಂಶಗಳಿರುವುದು ಪತ್ತೆಯಾಗಿದೆ. ಮಾದರಿಯನ್ನು ಪರೀಕ್ಷಿಸಿದ ಆಂತರಿಕ ರಸಾಯನ ಶಾಸ್ತ್ರಜ್ಞರು ವರದಿಯನ್ನು ನೀಡಿದರು ಮತ್ತು ಈ ಬಿಯರ್ ಮಾನವ ಬಳಕೆಗೆ ಯೋಗ್ಯವಲ್ಲ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಎ.ರವಿಶಂಕರ್ ಮಾಹಿತಿ ನೀಡಿದ್ದಾರೆ.

See also  ಕೇರಳ : ಹಡಗಿನಲ್ಲಿ ತರುತ್ತಿದ್ದ 10 ತೈಲ ಕಂಟೇನರ್‌ ಗಳು ಸಮುದ್ರಪಾಲು..! ಕಂಟೇನರ್‌ ಗಳು ದಡಕ್ಕೆ ಬಂದರೆ ಅವುಗಳ ಬಳಿ ತೆರಳದಂತೆ ಆದೇಶ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget