ವೈರಲ್ ನ್ಯೂಸ್

58 ವರ್ಷದ ಮಹಿಳೆಗೆ 14 ತಿಂಗಳ ಮಗುವಿನ ಕಿಡ್ನಿ ಕಸಿ..! ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದ್ದೆಲ್ಲಿ ಗೊತ್ತಾ..?

ನ್ಯೂಸ್ ನಾಟೌಟ್ : ಮೃತಪಟ್ಟ ಮೇಲೆ ದೇಹವನ್ನು ವ್ಯರ್ಥವಾಗಿ ಮಣ್ಣು ಮಾಡುವುದಕ್ಕಿಂತ ಅಂಗಾಂಗ ದಾನ ಮಾಡಿದರೆ ಇನ್ನೊಂದು ಜೀವದ ಜೀವನಕ್ಕೆ ಬೆಳಕಾಗಬಹುದು. ಹಾಗೆಯೇ ಇಲ್ಲೊಂದು ಕುಟುಂಬ ಮೆದುಳು ನಿಷ್ಕ್ರಿಯಗೊಂಡಿದ್ದ 14 ತಿಂಗಳ ಹಸುಗೂಸಿನ ಮೂತ್ರಪಿಂಡವನ್ನು ದಾನ ಮಾಡಿದ್ದು, ಅದನ್ನು 58 ವರ್ಷದ ಮಹಿಳೆಗೆ ಕಸಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಹೈದರಾಬಾದ್​ನ ಕಿಮ್ಸ್​ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು, ಕಳೆದ 7 ವರ್ಷಗಳಿಂದ ಮಹಿಳೆ ಮೂತ್ರಪಿಂಡ ಸಮಸ್ಯೆಯಿಂದಾಗಿ ಡಯಾಲಿಸಿಸ್‌ಗೆ ಒಳಗಾಗಿದ್ದರು. ಇದೇ ವೇಳೆ 14 ತಿಂಗಳ ಕೂಸಿನ ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರು ಮಗು ಬದುಕಿಸಲು ಸಾಧ್ಯವಿಲ್ಲ ಎಂದು ತಿಳಿಸಿದಾಗ, ಮಗುವಿನ ಕುಟುಂಬ ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ, ಮೂತ್ರಪಿಂಡವನ್ನು ಅಗತ್ಯವಿರುವ 58 ಮಹಿಳೆಗೆ ದಾನ ಮಾಡಲು ನಿರ್ಧರಿಸಿದ್ದಾರೆ.

ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಚಿಕ್ಕ ಮಕ್ಕಳ ಅಂಗಗಳು ತುಲನಾತ್ಮಕವಾಗಿ ಚಿಕ್ಕದಾಗಿರುವುದರಿಂದ ವಯಸ್ಸಾದ ಜನರಲ್ಲಿ ಅಳವಡಿಸುವಲ್ಲಿ ಹಲವು ತೊಡಕುಗಳು ಉಂಟಾಗುತ್ತವೆ. ಇದೆಲ್ಲವನ್ನೂ ಮೀರಿ ನುರಿತ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ನೆರವಿನಿಂದ ಈ ಸಾಧನೆ ಮಾಡಿದ್ದಾರೆ ಮತ್ತು ಈ ಬಗ್ಗೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Related posts

ರಾತ್ರಿ ದಂಪತಿ ಮಧ್ಯೆ ಜಗಳ..! 3 ಮಕ್ಕಳಿಗೆ ತಂಪು ಪಾನೀಯಕ್ಕೆ ಕ್ರಿಮಿನಾಶಕ ಸೇರಿಸಿ ಕುಡಿಸಿದ ತಾಯಿ..! ಮುಂದೇನಾಯ್ತು..?

ಗಣೇಶ ಹಬ್ಬದ ಸೆಕ್ಯುರಿಟಿಯಲ್ಲಿ ಪೊಲೀಸರು ಬ್ಯುಸಿ ..! ಕೈ, ಕಾಲು ಕಟ್ಟಿ ಮನೆ ದರೋಡೆ!

ಠಾಣೆ ಎದುರೇ ಎಸ್‌ ಐ ಪತ್ನಿ ಪತಿಯ ವಿರುದ್ಧ ಧರಣಿ..! ಅಹೋರಾತ್ರಿ ಧರಣಿಯ ಹಿಂದಿದೆ ವಿಚಿತ್ರ ಸ್ಟೋರಿ..!