ಕ್ರೈಂವೈರಲ್ ನ್ಯೂಸ್

ಸಹೋದರನಿಗೆ ಕಿಡ್ನಿ ದಾನ ನೀಡಿದ ಪತ್ನಿಗೆ ತಲಾಖ್ ನೀಡಿದನಾ ಪತಿ..? ಕಿಡ್ನಿ ಜೋಡನೆ ಮಾಡಿದ ಮೇಲೆ ₹40 ಲಕ್ಷಕ್ಕೆ ಬೇಡಿಕೆ ಇಟ್ಟದ್ದೇಗೆ ಆತ..?

231

ನ್ಯೂಸ್ ನಾಟೌಟ್ : ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪ್ರತಿಯಾಗಿ ಹಣ ಪಡೆಯದ್ದಕ್ಕೆ ಮಹಿಳೆಗೆ ಪತಿ ವಾಟ್ಸ್‌ಆ್ಯಪ್​ ಮೂಲಕ ವಿಚ್ಛೇದನ ನೀಡಿರುವ ಘಟನೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ವರದಿಯಾಗಿದೆ.

ಉತ್ತರ ಪ್ರದೇಶದ ಜೈತಾಪುರ ನಿವಾಸಿ ತರುನ್ನುಮ್​ ಇದೇ ಗ್ರಾಮದ ನಿವಾಸಿಯಾಗಿರುವ ರಶೀದ್​ ಎಂಬವರನ್ನು ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದರು ಎನ್ನಲಾಗಿದೆ. ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ರಶೀದ್​ ಮತ್ತೊಂದು ಮದುವೆಯಾಗಿದ್ದನು ಎಂದು ತರುನ್ನುಮ್​ ತಿಳಿಸಿದ್ದಾನೆ.

ರಶೀದ್​ ಸೌದಿ ಅರೇಬಿಯಾದಲ್ಲಿ ಉದ್ಯೋಗ ಮಾಡುತ್ತಿದ್ದು, ಈ ನಡುವೆ ತರುನ್ನುಮ್​ ಸಹೋದರ ಶಾಕೀರ್​ಗೆ ತೀವ್ರ ಅನಾರೋಗ್ಯ ಉಂಟಾಗಿತ್ತು. ವೈದ್ಯರು ಪರೀಕ್ಷಿಸಿದಾಗ ಕಿಡ್ನಿ ವೈಫಲ್ಯ ಕಂಡುಬಂದಿದೆ. ಕೂಡಲೇ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಇದೆ ಎಂದು ವೈದ್ಯರು ಹೇಳಿದ್ದರು. ಸಹೋದರನ ಪ್ರಾಣ ಉಳಿಸಲು ರಶೀದ್ ನ ಪತ್ನಿ ತರುನ್ನುಮ್​ ಕಿಡ್ನಿ ದಾನ ಮಾಡಲು ಒಪ್ಪಿಕೊಂಡಿದ್ದಾಳೆ. ಇದಕ್ಕೆ ಪತಿ ರಶೀದ್​ ಕೂಡ ಮೊದಲು ಒಪ್ಪಿಗೆ ಸೂಚಿಸಿದ್ದನು ಎನ್ನಲಾಗಿದೆ. ಬಳಿಕ ಶಾಕೀರ್​ಗೆ ಮುಂಬೈನ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಜೋಡಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಆಕೆಯ ಸಹೋದರ ಶಾಕೀರ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ​ ನೇರವಾಗಿ ತನ್ನ ಅತ್ತೆ ಮನೆಗೆ ಬಂದಿದ್ದಾರೆ. ಈ ವಿಷಯವನ್ನು ಪತಿ​ಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ರಶೀದ್​, ಸಹೋದರನಿಂದ 40 ಲಕ್ಷ ರೂ ಪಡೆಯುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೊಪ್ಪದ ಪತ್ನಿ ತರುನ್ನುಮ್​ಗೆ ವಾಟ್ಸ್‌ಆ್ಯಪ್​ ಮೂಲಕ ತ್ರಿವಳಿ ತಲಾಖ್​ ನೀಡಿದ್ದಾನೆ. ಇದೀಗ ನ್ಯಾಯ ಕೊಡಿಸುವಂತೆ ತರುನ್ನುಮ್​ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ತರುನ್ನುಮ್​, ನನ್ನ ಸಹೋದರನಿಗೆ ಕಿಡ್ನಿ ವೈಫಲ್ಯ ಉಂಟಾಗಿತ್ತು. ಕಳೆದ ಐದು ತಿಂಗಳ ಹಿಂದೆ ಸಹೋದರನಿಗೆ ನನ್ನ ಕಿಡ್ನಿಯನ್ನು ಅಳವಡಿಸಲಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ನಾನು ನನ್ನ ಅತ್ತೆ ಮನೆಗೆ ಬಂದೆ. ಈ ವೇಳೆ ಪತಿ ಕಿಡ್ನಿ ನೀಡಿರುವುದಕ್ಕೆ ಪ್ರತಿಯಾಗಿ 40 ಲಕ್ಷ ರೂ ಪಡೆಯುವಂತೆ ಹೇಳಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಆಗಸ್ಟ್​ 30ರಂದು ವಾಟ್ಸ್‌ಆ್ಯಪ್​ ಮೂಲಕ ತ್ರಿವಳಿ ತಲಾಖ್​ ನೀಡಿದ್ದಾನೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

https://newsnotout.com/2023/12/puttur-dambar-snake-issue-news/
See also  ಜಾಮೀನು ಕೋರಿ ಪ್ರಜ್ವಲ್ ರೇವಣ್ಣ‌ ಮತ್ತೆ ಹೈಕೋರ್ಟ್ ಗೆ ಅರ್ಜಿ..! ಮಾಜಿ ಸಂಸದನಿಗೆ ಸಿಗಲಿದೆಯಾ ಬಿಡುಗಡೆ ಭಾಗ್ಯ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget