ಕ್ರೀಡೆ/ಸಿನಿಮಾ

ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ ಕಿಚ್ಚ ಸುದೀಪ್,ಟ್ವೀಟ್‌ ಮೂಲಕ ಹೇಳಿದ್ದೇನು? ಇದರ ಹಿಂದಿದೆ ನೋವಿನ ಕಥೆ?

179

ನ್ಯೂಸ್‌ ನಾಟೌಟ್‌ : ಕೆಲವರು ಪ್ರಶಸ್ತಿ ಬರುತ್ತೆ ಎಂದರೆ ಸಂಭ್ರಮ ಪಡುತ್ತಾರೆ. ಆದರೆ ಇನ್ನೂ ಕೆಲವರು ಆ ಪ್ರಶಸ್ತಿಗಳನ್ನು ನಿರಾಕರಿಸುತ್ತಾರೆ. ಬಾಲಿವುಡ್‌ ನ ಆಮಿರ್ ಖಾನ್ ಅವರು ಯಾವುದೇ ಅವಾರ್ಡ್ ಕಾರ್ಯಕ್ರಮಗಳಿಗೂ ತೆರಳುವುದಿಲ್ಲ. ಕನ್ನಡದಲ್ಲಿ ಕಿಚ್ಚ ಸುದೀಪ್ ಕೂಡ ಇದೀಗ ಪ್ರಶಸ್ತಿಯೊಂದನ್ನು ನಿರಾಕರಿಸಿದ್ದಾರೆ. ‘ಪೈಲ್ವಾನ್’ ಚಿತ್ರಕ್ಕಾಗಿ ಸುದೀಪ್ ಅವರಿಗೆ ರಾಜ್ಯ ಪ್ರಶಸ್ತಿ ಬಂದಿತ್ತು. ಆದರೆ, ಇದನ್ನು ಅವರು ಸ್ವೀಕರಿಸಿಲ್ಲ. ಆ ಪ್ರಶಸ್ತಿಯನ್ನು ಸ್ವೀಕರಿಸದಿರಲು ಕಾರಣವೇನು?

ಕಿಚ್ಚ ಸುದೀಪ್ ಕನ್ನಡದ ಹೆಸರಾಂತ ನಟ. ಅವರು ಅಭಿನಯಿಸಿದ ಚಿತ್ರಗಳು ಸಾಕಷ್ಟು ಯಶಸ್ಸು ಕಂಡಿವೆ. ಹೀಗಾಗಿ ಅವರನ್ನು ಪ್ರಶಸ್ತಿಗಳು ಅರಸಿಕೊಂಡು ಬರುತ್ತಿವೆ. ಆದರೆ, ಕೆಲ ವರ್ಷಗಳಿಂದ ಪ್ರಶಸ್ತಿಗಳನ್ನು ಸುದೀಪ್ ನಿರಾಕರಿಸುತ್ತಾ ಬಂದಿದ್ದಾರೆ. ಇದಕ್ಕೆ ಕಾರಣವಿದೆ ಎಂದು ಹೇಳಲಾಗುತ್ತಿದೆ.

ಅದಕ್ಕೆ ಕಾರಣ ಆ ಎರಡು ಘಟನೆಗಳು.‘ರಂಗ ಎಸ್ಎಸ್ಎಲ್​ಸಿ’ (2004) ಮತ್ತು ‘ಮುಸ್ಸಂಜೆ ಮಾತು’ (2008) ಸಿನಿಮಾ ಮಾಡಿದಾಗ ಪ್ರಶಸ್ತಿ ಕಮಿಟಿಯಲ್ಲಿದ್ದವರೇ ಸುದೀಪ್‌ಗೆ ಕರೆ ಮಾಡಿ ನಿಮಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಎಂದು ಹೇಳಿದ್ದರಂತೆ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಾಗ ಅವಾರ್ಡ್ ಬಂದಿದೆ ಎಂದರೆ ಖುಷಿ ಆಗಿಯೇ ಆಗುತ್ತದೆ. ಹೀಗಾಗಿ ಅವಾರ್ಡ್​ ಕಮಿಟಿಯವರ ಮಾತನ್ನು ಕೇಳಿ ಸುದೀಪ್ ಸಂಭ್ರಮಿಸಿದ್ದರಂತೆ.

ಆದರೆ, ರಾಜ್ಯ ಪ್ರಶಸ್ತಿ ಘೋಷಣೆ ಆದಾಗ ಮಾತ್ರ ಅಲ್ಲಿ ಅದು ಬೇರೆ ನಟರ ಪಾಲಾಗಿತ್ತು ಎಂದು ಹೇಳಲಾಗಿದೆ. ಈ ಎರಡು ಘಟನೆಯಿಂದಾಗಿ ಅವರು ಪ್ರಶಸ್ತಿಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಎಂದಿದ್ದಾರೆ. ಈ ಮೊದಲು ‘ಸೈಮಾ ಅವಾರ್ಡ್​’ ಸಮಾರಂಭಕ್ಕೆ ಗೆಸ್ಟ್ ಆಗಿ ಹೋಗಿದ್ದರು ಅಷ್ಟೇ. ಅದನ್ನು ಹೊರತುಪಡಿಸಿ ಅವರು ಅವಾರ್ಡ್ ಸ್ವೀಕರಿಸಿಲ್ಲ.

ಇದೀಗ ಕಿಚ್ಚ ಸುದೀಪ್ ಅವರಿಗೆ ‘ಪೈಲ್ವಾನ್’ ಚಿತ್ರದ ನಟನೆಗೆ ರಾಜ್ಯ ಸರ್ಕಾರ ‘ಅತ್ಯುತ್ತಮ ನಟ’ ಅವಾರ್ಡ್‌ ಗೆ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಟ್ವೀಟ್ ಮಾಡಿದ್ದ ಕಿಚ್ಚ ಸುದೀಪ್ , ‘ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ನಾನು ನಿರ್ಧರಿಸಿದ್ದೇನೆ. ಅದಕ್ಕೆ ವಿವಿಧ ವೈಯಕ್ತಿಕ ಕಾರಣಗಳಿವೆ’ ಎಂದು ಸುದೀಪ್ ಹೇಳಿದ್ದಾರೆ. ಈ ಮೂಲಕ ಅವಾರ್ಡ್ ಬೇಡ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸುದೀಪ್ ಅವರು “ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಗೌರವದ ವಿಷಯವಾಗಿದೆ ಮತ್ತು ಈ ಗೌರವಕ್ಕಾಗಿ ತೀರ್ಪುಗಾರರಿಗೆ ನಾನು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದಾಗ್ಯೂ, ನಾನು ಹೇಳಬೇಕಾದ್ದಾದರೆ, ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯುವುದನ್ನು ನಿಲ್ಲಿಸಲು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಇದು ನಾನು ಹೃದಯಪೂರ್ವಕವಾಗಿ ಪಾಲಿಸಲು ಉದ್ದೇಶಿಸಿರುವ ವೈಯಕ್ತಿಕ ಕಾರಣಗಳಿಗಾಗಿ ಇದೀಗ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಯನ್ನು ಪಡೆಯದಿರಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

See also  ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್

ತಮ್ಮ ಕಲೆಯಲ್ಲಿ ತಮ್ಮನ್ನೇ ತೊಡಗಿಸಿಕೊಂಡ ಅನೇಕ ಅರ್ಹ ನಟರಿದ್ದಾರೆ. ಈ ಪ್ರತಿಷ್ಠಿತ ಮನ್ನಣೆಯನ್ನು ನಾನು ಶ್ಲಾಘಿಸುತ್ತೇನೆ. ಆದರೆ, ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುವುದಕ್ಕಿಂತ, ಅರ್ಹ ಒಬ್ಬರು ಪ್ರಶಸ್ತಿ ಪಡೆಯುವುದನ್ನು ನೋಡುವುದು ನನಗೆ ಸಂತೋಷವನ್ನು ನೀಡುತ್ತದೆ. ಜನರನ್ನು ರಂಜಿಸುವ ನನ್ನ ಸಿನಿಮಾದ ಕೆಲಸ ಯಾವಾಗಲೂ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆ ಸಾಗುತ್ತಾ ಬಂದಿದೆ. ಮತ್ತು ತೀರ್ಪುಗಾರರ ಈ ಪ್ರಶಂಸೆಯು ತನ್ನನ್ನು ಸಿನಿಮಾದಲ್ಲಿ ಇನ್ನಷ್ಟು ಶ್ರೇಷ್ಠವಾಗಿಸಿಕೊಳ್ಳಲು ಶ್ರಮಿಸುವುದನ್ನು ಮುಂದುವರೆಸಲು ಗಮನಾರ್ಹ ಉತ್ತೇಜನ ನೀಡುತ್ತದೆ.

  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget