ವೈರಲ್ ನ್ಯೂಸ್ಸಿನಿಮಾ

ಕಿಚ್ಚ ಸುದೀಪ್ ಅಭಿನಯದ Max ಚಿತ್ರ ಶೀಘ್ರದಲ್ಲಿ OTT ಗೆ ಬರಲಿದೆ, ಯಾವಾಗ ? ಯಾವುದರಲ್ಲಿ..?

211

ನ್ಯೂಸ್ ನಾಟೌಟ್: ನಟ ಕಿಚ್ಚ ಸುದೀಪ್ ಅಭಿನಯದ ಕನ್ನಡ ಚಿತ್ರ ಮ್ಯಾಕ್ಸ್ ಶೀಘ್ರದಲ್ಲೇ ಒಟಿಟಿ ಪ್ಲಾಟ್ ಫಾರ್ಮ್ ಗೆ ಲಗ್ಗೆ ಇಡುತ್ತಿದೆ. ಕಳೆದ ಡಿಸೆಂಬರ್ 25ರಂದು ತೆರೆಗೆ ಬಂದು ಬಾಕ್ಸ್ ಆಫೀಸ್‌ ನಲ್ಲಿ ಧೂಳೆಬ್ಬಿಸುತ್ತಿರುವ ನಟ ಕಿಚ್ಚ ಸುದೀಪ್‌ ಅಭಿನಯದ ಆಕ್ಷನ್ ಥ್ರಿಲ್ಲರ್ ಮ್ಯಾಕ್ಸ್ ಚಿತ್ರ ಶೀಘ್ರದಲ್ಲೇ ಓಟಿಟಿಗೆ ಲಗ್ಗೆ ಇಡುತ್ತಿದೆ.
ಡಿಸೆಂಬರ್‌ 25ರ ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಮ್ಯಾಕ್ಸ್’ ಸಿನಿಮಾ ಬಾಕ್ಸ್ ಆಫೀಸ್‌ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ 2 ವಾರಗಳೇ ಕಳೆದರೂ ಚಿತ್ರಮಂದಿರಗಳಲ್ಲಿ ಮ್ಯಾಕ್ಸ್ ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿಯೂ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆ ಆಗಿತ್ತು. ಇದೀಗ 10 ದಿನಗಳ ಬಳಿಕ ಈ ಸಿನಿಮಾದ ಒಟಿಟಿ ಪ್ರಸಾರದ ಬಗ್ಗೆ ಅಪ್‌ ಡೇಟ್‌ ಸಿಕ್ಕಿದೆ.

ಈಗಾಗಲೇ ಜೀ5 ಸಂಸ್ಥೆ ಮ್ಯಾಕ್ಸ್‌ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಸ್ಯಾಟಲೈಟ್‌ ಹಕ್ಕುಗಳನ್ನೂ ಸಹ ಜೀ ಕನ್ನಡ ಪಡೆದುಕೊಂಡಿದೆ. ಅದರಂತೆ ಜೀ 5ನಲ್ಲಿ ಮ್ಯಾಕ್ಸ್ ಸಿನಿಮಾ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಜೀ5 ಮ್ಯಾಕ್ಸ್‌ ಚಿತ್ರವನ್ನು ಸ್ಟ್ರೀಮಿಂಗ್ ಮಾಡಲು ಸಜ್ಜಾಗುತ್ತಿದೆ ಎಂಬ ವರದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವಿಷಯದ ಬಗ್ಗೆ ಜೀ5 ಒಟಿಟಿ ಅಧಿಕೃತ ಘೋಷಣೆ ಮಾಡಬೇಕಿದೆ.ಮ್ಯಾಕ್ಸ್ ಚಿತ್ರ ಸದ್ಯ ಚಿತ್ರಮಂದಿರಗಳಲ್ಲಿ 14 ದಿನಗಳನ್ನು ಪೂರೈಸಿದ್ದು, ಥಿಯೇಟ್ರಿಕಲ್‌ ಓಟ ಮುಗಿದ ಬಳಿಕ ಒಟಿಟಿಯತ್ತ ಮುಖಮಾಡಲಿದೆ ಎನ್ನಲಾಗಿದೆ. ಚಿತ್ರತಂಡದ ಮೂಲಗಳ ಪ್ರಕಾರ ಜನವರಿ ಕೊನೆಯ ವಾರದಲ್ಲಿ ಅಂದರೆ ಜನವರಿ 31ರಂದು ಚಿತ್ರ ಓಟಿಟಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆದಾಗ್ಯೂ ಓಟಿಟಿ ಬಿಡುಗಡೆ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Click

https://newsnotout.com/2025/01/kannada-news-house-kannada-news-14-acre-home-viral-news-police/
https://newsnotout.com/2025/01/actor-vishal-hospitalized-in-apolo-chennai-kannada-news-viral-jd/
https://newsnotout.com/2025/01/kannada-news-nepala-kannada-news-india-nepala-news/
https://newsnotout.com/2025/01/darshan-thugudeepa-kannada-news-viral-issue-police-department-appeal-d/
https://newsnotout.com/2025/01/mangaluru-mangaluru-central-jail-kannada-news-d/
https://newsnotout.com/2025/01/naxal-wrote-a-latter-to-karnataka-and-kerala-govt-as-surrender-latter/
https://newsnotout.com/2025/01/hmpv-kannada-news-health-jp-nadda-announces-road-map-and-health-care/
See also  ಮುಸ್ಲಿಂ ಸ್ನೇಹಿತನಿಗಾಗಿ ಧರ್ಮಸ್ಥಳದಲ್ಲಿ ತುಲಾಭಾರ ಹರಕೆ ಸಲ್ಲಿಸಿದ ಹಿಂದೂ..! ತಿರುಪತಿಗೂ ಒಟ್ಟಿಗೆ ಹೋಗಿ ಹರಕೆ ಸಲ್ಲಿಸಿದ್ದ ಬಗ್ಗೆ ಮುಸ್ಲಿಂ ಗೆಳೆಯ ಹೇಳಿದ್ದೇನು? ಏನಿದು ಪ್ರಾಣ ಸ್ನೇಹಿತರ ಕಥೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget