ಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

Kiccha Sudeep about Darshan Case: ದರ್ಶನ್ ಮತ್ತು ಟೀಂ ಕೊಲೆ ಕೇಸ್: ಅಭಿನಯ ಚಕ್ರವರ್ತಿ ನಟ ಸುದೀಪ್ ಮೊದಲ ಪ್ರತಿಕ್ರಿಯೆ, ಏನಂದ್ರು ಕಿಚ್ಚ..?

247

ನ್ಯೂಸ್ ನಾಟೌಟ್: ನಟ ದರ್ಶನ್ ಮತ್ತು ಟೀಂ ಮಾಡಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಭಾನುವಾರ ಮಾತನಾಡಿದ ಅವರು, ‘ ಮಾಧ್ಯಮ, ಪೊಲೀಸ್ ಸಿಬ್ಬಂದಿ ತುಂಬಾ ಕೆಲಸ ಮಾಡುತ್ತಿದ್ದೀರಿ, ನಿಮ್ಮ ಕೆಲಸವನ್ನು ನಾನು ಗೌರವಿಸುತ್ತೇನೆ. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಅವರು, ‘ರೇಣುಕಾಸ್ವಾಮಿ ಪತ್ನಿಗೆ ನ್ಯಾಯ ಸಿಗಬೇಕು, ಇನ್ನೂ ಹುಟ್ಟಬೇಕಿರುವ ಅವರ ಮಗುವಿಗೆ ನ್ಯಾಯ ಸಿಗಬೇಕು. ಕನ್ನಡ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಬರುವುದು ನನಗೆ ಇಷ್ಟವಿಲ್ಲ. ಎಷ್ಟೋ ಕಲಾವಿದರು ನಮ್ಮ ಹಿರಿಯರು ಕಷ್ಟ ಪಟ್ಟು ಬೆಳೆಸಿದ ಸಂಸ್ಥೆಯಿದು. ಬೆವರಿನ ಹನಿಗಳಿಂದ ಕಟ್ಟಿದ ಸಂಸ್ಥೆಯ ಹೆಸರು ಹಾಳಾಗಬಾರದು’ ಎಂದು ತಿಳಿಸಿದರು.

ಚಿತ್ರರಂಗದಿಂದ ದರ್ಶನ್ ಬ್ಯಾನ್ ಮಾಡೋದರ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ‘ಇಲ್ಲಿ ಬ್ಯಾನ್ ಅನ್ನೋದು ಸೆಕೆಂಡರಿ, ಬ್ಯಾನ್ ಮಾಡೋದಕ್ಕಿಂತ ರೇಣುಕಾ ಸ್ವಾಮಿಗೆ ನ್ಯಾಯ ಸಿಗೋದು ಮುಖ್ಯ. ನ್ಯಾಯದ ಮೇಲೆ ಜನರಿಗೆ ಒಂದು ನಂಬಿಕೆ ಹುಟ್ಟಬೇಕು. ಅದನ್ನು ಬಿಟ್ಟು ಬ್ಯಾನ್ ಮಾಡುವುದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ’ ಎಂದು ತಿಳಿಸಿದರು.

See also  ಭಾರತದ ನಂ.1 ಗಾಯಕಿ ಶ್ರೇಯಾ ಘೋಷಾಲ್ ಪತಿಯ ಆಸ್ತಿ ಮೌಲ್ಯವೆಷ್ಟು? ಶ್ರೀಮಂತ ಹಾಡುಗಾರ್ತಿಯಾದರೂ ಪತಿಯ ಅರ್ಧದಷ್ಟೂ ಶ್ರೀಮಂತಿಕೆ ಹೊಂದಿಲ್ಲ ಶ್ರೇಯಾ!!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget