ಕ್ರೈಂವೈರಲ್ ನ್ಯೂಸ್ಸಿನಿಮಾ

ಕೀ ಪ್ಯಾಡ್‌ ಫೋನ್ ನುಂಗಿ ಪ್ರಾಣ ಕಳೆದುಕೊಂಡ ಮಹಿಳೆ..! ಏನಿದು ವಿಚಿತ್ರ ಪ್ರಕರಣ..?

234

ನ್ಯೂಸ್ ನಾಟೌಟ್: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಸೆಲ್‌ ಫೋನ್‌ ನುಂಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆಕೆ ಕೀ ಪ್ಯಾಡ್‌ ಸೆಲ್‌ ಫೋನ್‌ ನುಂಗಿದ ಪರಿಣಾಮ ಅನ್ನನಾಳಕ್ಕೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಈ ದಾರುಣ ಘಟನೆ ನಡೆದಿದ್ದು, ರಾಜಮಹೇಂದ್ರವರಂನ ಬೊಮ್ಮೂರಿನ ಪೆನುಮಲ್ಲದ ರಮ್ಯ ಸ್ಮೃತಿ ಎಂಬ 35 ವರ್ಷ ವಯಸ್ಸಿನ ಮಹಿಳೆ ಸೆಲ್‌ ಫೋನ್‌ ನುಂಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ.

ಕುಟುಂಬಸ್ಥರ ಪ್ರಕಾರ, ರಮ್ಯ ಸ್ಮೃತಿ ಕಳೆದ 15 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಮೊನ್ನೆಯಷ್ಟೆ ಆಕೆ ಮೊಬೈಲ್‌ ಫೋನ್‌ ಅನ್ನು ನುಂಗಿದ್ದು, ಮನೆಯವರು ಮೊಬೈಲ್‌ಗಾಗಿ ಹುಡುಕಾಟ ನಡೆಸುವಾಗ ಆಕೆ ಮೊಬೈಲ್‌ ನುಂಗಿರುವ ಬಗ್ಗೆ ಹೇಳಿದ್ದಾಳೆ ಎಂದಿದ್ದಾರೆ. ತಕ್ಷಣ ಆಕೆಯನ್ನು ರಾಜಮಹೇಂದ್ರವರಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಕೆ ಮೊಬೈಲ್‌ ನುಂಗಿದ ಪರಿಣಾಮ ಅನ್ನ ನಾಳಕ್ಕೆ ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಮನೆಯವರು ರಮ್ಯ ಸ್ಮೃತಿಯನ್ನು ಶನಿವಾರ ಜನವರಿ 25 ರ ರಾತ್ರಿ ಕಾಕಿನಾಡದ ಜಿಜಿಎಚ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸ್ಮೃತಿ ಮೃತಪಟ್ಟಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2025/01/central-home-minister-amith-shah-kumbha-mela-s/
https://newsnotout.com/2025/01/kannada-news-actress-shashikala-serial-kannada-news-fir/
https://newsnotout.com/2025/01/monkey-kannada-news-10-student-nomore-d/
https://newsnotout.com/2025/01/microfinance-issue-women-nomore-in-mysore-siddaramaiha/
https://newsnotout.com/2025/01/delhi-election-strategy-kannada-news-viral-news/
See also  ಮಂಗಳೂರು: ಬೈಕ್ ಸವಾರನಿಗೆ ದಿಢೀರ್ ಅಡ್ಡ ಬಂದ ಶ್ವಾನ..! ಡಿವೈಡರ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget