ನ್ಯೂಸ್ ನಾಟೌಟ್: ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರು ಅದೃಷ್ಟ ಅನ್ನುವುದು ಕೈ ಹಿಡಿಯುವುದೇ ಇಲ್ಲ. ಆದರೆ ಕೆಲವರನ್ನು ಅದೃಷ್ಟ ಲಕ್ಷ್ಮೀ ಹುಡುಕಿಕೊಂಡೇ ಬರುತ್ತಾಳೆ ಅನ್ನೋದಕ್ಕೆ ಇಲ್ಲೊಂದು ತಾಜಾ ಉದಾಹರಣೆಯನ್ನು ನಾವು ಕಾಣಬಹುದಾಗಿದೆ.
ಸುಳ್ಯ ತಾಲೂಕಿನ ಉಬರಡ್ಕದ ವಿನಯ್ ಕೆಟರಿಂಗ್ ನಡೆಸುತ್ತಿರುವ ವಿನಯ್ ಯಾವಟೆ ಅವರಿಗೆ ಇಂದು (ಆ.16) ನಡೆದ ಕೇರಳ ರಾಜ್ಯ ಲಾಟರಿ ಡ್ರಾದಲ್ಲಿ ಅವರು ಖರೀದಿಸಿದ KZ445643 ಸಂಖ್ಯೆಗೆ ಒಂದು ಕೋಟಿ ರೂ. ಒಲಿದಿದೆ. ಸ್ವತಃ ಈ ವಿಷಯವನ್ನು ಅವರು ನ್ಯೂಸ್ ನಾಟೌಟ್ ನೊಂದಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಕೆಟರಿಂಗ್ ಕೆಲಸಕ್ಕಾಗಿ ಕೇರಳಕ್ಕೆ ಹೋಗಿದ್ದಾಗ ಲಾಟರಿ ಖರೀದಿಸಿರುವುದಾಗಿ ತಿಳಿಸಿದ್ದಾರೆ.