ಕರಾವಳಿ

ಈ ವಿಶ್ವವಿದ್ಯಾಲಯದಲ್ಲಿ ಮುಟ್ಟಿನ ಸಮಯದಲ್ಲೂ ರಜೆ ಸಿಗುತ್ತೆ,ದೇಶದಲ್ಲೇ ಮೊದಲ ಬಾರಿಗೆ ರಜೆ ಘೋಷಿಸಿದ ಕೇರಳ ಶಿಕ್ಷಣ ಇಲಾಖೆ

ನ್ಯೂಸ್ ನಾಟೌಟ್ : ಮುಟ್ಟಾದ ಸಮಯದಲ್ಲಿ ಕೆಲವು ಹೆಣ್ಮಕ್ಕಳು,ಮಹಿಳೆಯರು ಪಡುವ ಕಷ್ಟ ಅಷ್ಟಿಷ್ಟಲ್ಲ.ಹೊಟ್ಟೆನೋವು,ಸೊಂಟನೋವು,ಬೆನ್ನು ನೋವು,ತಲೆನೋವು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹೀಗಿದ್ದರೂ ಅವರು ಕಾಲೇಜ್, ಆಫೀಸ್ ಗಳಿಗೆ ಹೋಗಿ ಕೆಲಸ ಮಾಡುತ್ತಾರೆ.ಮನೆಯಲ್ಲೂ ಕೆಲಸ ನಿರ್ವಹಿಸುತ್ತಾರೆ.ಇದಕ್ಕಾಗಿ ಕೇರಳದ ವಿಶ್ವ ವಿದ್ಯಾಲಯವೊಂದು ಮಹತ್ವದ ನಿರ್ಧಾರ ತೆಗೆದು ಕೊಂಡಿದೆ.ಇದೇ ಮೊದಲ ಬಾರಿ ಎಂಬಂತೆ ಕೇರಳದ ವಿಶ್ವವಿದ್ಯಾನಿಲಯವೊಂದು ತನ್ನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಲು ನಿರ್ಧರಿಸಿದೆ.

ಹೆಚ್ಚು ವಿಶ್ರಾಂತಿ ಅಗತ್ಯ:

ಹೌದು, ಈ ಸಮಯದಲ್ಲಿ ಅವರಿಗೆ ಹೆಚ್ಚು ವಿಶ್ರಾಂತಿಯ ಅಗತ್ಯವಿರುತ್ತದೆ. ಆದರೆ ಇಂಥಾ ಸಂದರ್ಭದಲ್ಲೂ ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಕಾಲೇಜು, ಆಫೀಸ್‌ಗೆ ಹೋಗಬೇಕಾಗುತ್ತದೆ. ಮನೆಗೆಲಸಗಳನ್ನು ಮಾಡಬೇಕಾಗುತ್ತದೆ. ಮಹಿಳೆಯರ ಇಂಥಾ ಸಮಸ್ಯೆಯನ್ನು ಮನಗಂಡ ಕೇರಳದ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು (CUSAT) ತನ್ನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಲು ಮುಂದಾಗಿದೆ.ಕೊಚ್ಚಿ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾನಿಲಯ (ಕುಸಾಟ್)ದ ವಿದ್ಯಾರ್ಥಿಗಳ ಒಕ್ಕೂಟದ ಬೇಡಿಕೆಯ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಈ ಸಂಬಂಧ ವಿಶ್ವವಿದ್ಯಾನಿಲಯ ಆದೇಶ ನೀಡಿದ್ದು, ವಿದ್ಯಾರ್ಥಿನಿಯರ ಬಹು ಕಾಲದ ಬೇಡಿಕೆ ಈಡೇರಿದಂತಾಗಿದೆ.

4000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು:

ಕುಸಾಟ್‌ನ ವಿದ್ಯಾರ್ಥಿನಿಯರು ಹಾಜರಾತಿ ಕೊರತೆ ಸಂದರ್ಭ ಈ ಋತುಚಕ್ರ ರಜೆಯ ಸೌಲಭ್ಯ ಪಡೆಯಬಹುದು.ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 4000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವವರು ಸೇರಿದಂತೆ ವಿದ್ಯಾರ್ಥಿನಿಯರಿಗೆ ಮುಟ್ಟಿನ ದಿನಗಳಲ್ಲಿ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡುವಂತೆ ವಿವಿಧ ವಿದ್ಯಾರ್ಥಿ ಸಂಘಗಳು ಬಹುಕಾಲದಿಂದ ಒತ್ತಾಯಿಸುತ್ತಾ ಬಂದಿದ್ದವು.

ಪ್ರತಿ ಸೆಮಿಸ್ಟರ್‌ಗೆ ಶೇ.2 ಹೆಚ್ಚುವರಿ ರಜೆ:

ಪ್ರತಿ ಸೆಮಿಸ್ಟರ್‌ಗೆ ಅವರಿಗೆ ಶೇ. 2 ಹೆಚ್ಚುವರಿ ರಜೆ ನೀಡಲಾಗುವುದು, ಪ್ರಸಕ್ತ ಶೇ. 75 ಹಾಜರಾತಿ ಇದ್ದವರು ಮಾತ್ರ ಸೆಮಿಸ್ಟರ್‌ ಪರೀಕ್ಷೆ ಬರೆಯಬಹುದು, ಇದಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಕುಲಪತಿ ಅವರಿಗೆ ಅರ್ಜಿ ಸಲ್ಲಿಸಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ, ಆದರೆ, ಋತುಚಕ್ರದ ರಜೆಗೆ ವೈದ್ಯಕೀಯ ಪ್ರಮಾಣ ಪತ್ರದ ಅಗತ್ಯ ಇಲ್ಲ. ವಿದ್ಯಾರ್ಥಿನಿಯರು ಕೇವಲ ಅರ್ಜಿ ಸಲ್ಲಿಸಿದರೆ ಸಾಕು,ಎಸ್‌ಎಫ್‌ಐನ ವಿದ್ಯಾರ್ಥಿಗಳ ನೇತೃತ್ವದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟ ಋತುಚಕ್ರದ ರಜೆ ನೀಡುವಂತೆ ವಿಶ್ವವಿದ್ಯಾನಿಲಯಕ್ಕೆ ಒತ್ತಾಯಿಸಿತ್ತು.ಒಕ್ಕೂಟದ ಮಧ್ಯಸ್ಥಿಕೆಯಲ್ಲಿ ವಿಶ್ವವಿದ್ಯಾನಿಲಯ ಈ ನಿರ್ಧಾರ ತೆಗೆದುಕೊಂಡಿದೆ.

Related posts

ಸುಳ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಭಕ್ತರ ಪರದಾಟ..! ತಡರಾತ್ರಿ ಆಗಿದ್ದರೂ ಬಸ್ ಗೆ ಕಾದು ಸುಸ್ತು..!

ಮಂಗಳೂರು: ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದಿಂದ ಶ್ರದ್ದಾಂಜಲಿ ಸಭೆ

ಜೂನ್ ‌3, 4ರಂದು ಮಂಗಳೂರಿನಲ್ಲಿ ಘಮಘಮಿಸಲಿದೆ ಹಲಸು ಪರಿಮಳ