ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಕೇರಳ ಸ್ಟೋರಿ ನಟಿ ಆದಾ ಶರ್ಮಾ ಆಸ್ಪತ್ರೆ ದಾಖಲು..! ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ! ಅಷ್ಟಕ್ಕೂ ನಟಿಗೇನಾಯ್ತು?

172

ನ್ಯೂಸ್‌ ನಾಟೌಟ್‌: ಕೇರಳ ಸ್ಟೋರಿ ಚಿತ್ರದ ನಾಯಕ ನಟಿ ಆದಾ ಶರ್ಮಾ ತೀವ್ರ ಆಸ್ವಸ್ಥಗೊಂಡು ಬುಧವಾರ ರಾತ್ರಿ ಆಸ್ಪತ್ರೆ ದಾಖಲಾಗಿದ್ದಾರೆ. ಕಮಾಂಡೋ ಚಿತ್ರದ ಪ್ರಮೋಶನ್ ಈವೆಂಟ್ ಕಾರ್ಯಕ್ರಮದಲ್ಲಿ ಆಸ್ವಸ್ಧಗೊಂಡ ಆದಾ ಶರ್ಮಾ ಕುಸಿದುಬಿದ್ದಿದ್ದಾರೆ. ತಕ್ಷಣವೇ ಆದಾ ಶರ್ಮಾರನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದಾ ಶರ್ಮಾ ಅತಿಸಾರ ಹಾಗೂ ವಾಂತಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಕಮಾಂಡೋ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಆದಾ ಶರ್ಮಾ ತೀವ್ರ ಅಸ್ವಸ್ಥಗೊಂಡಿದ್ದಾರೆ. ಬುಧವಾರ (ಆ.2 ರಂದು) ಬೆಳಗ್ಗೆ ಆಯೋಜಿಸಿದ ಕಾರ್ಯಕ್ರಮಕ್ಕೆ ಹಾಜರಾದ ಆದಾ ಶರ್ಮಾ ಸಂಪೂರ್ಣವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಕಾರ್ಯಕ್ರಮದ ನಡುವೆ ಎದ್ದು ವಿಶ್ರಾಂತಿ ಕೊಠಡಿಗೆ ತೆರಳಿದ ಆದಾ ಶರ್ಮಾ ಅಸ್ವಸ್ಥಗೊಂಡಿದ್ದಾರೆ. ಅತಿಸಾರ ಹಾಗೂ ವಾಂತಿಯಿಂದ ಬಳಲಿದ್ದಾರೆ. ಆಹಾರದಲ್ಲಿ ಏರುಪೇರಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಅದಾ ಶರ್ಮಾ ಆರೋಗ್ಯ ಕ್ಷೀಣಿಸಿದೆ. ಹೀಗಾಗಿ ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಯಿತು. ತುರ್ತು ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇಹದಲ್ಲಿ ನೀರಿನ ಅಂಶವೂ ಕಡಿಮೆಯಾಗಿರುವ ಕಾರಣ ಅದಾ ಶರ್ಮಾ ಬಳಲಿದ್ದಾರೆ. ಒತ್ತಡ, ಬಿಡುವಿಲ್ಲದ ಶೂಟಿಂಗ್ ಹಾಗೂ ಕಾರ್ಯಕ್ರಮ, ಜೊತೆಗೆ ಫುಡ್ ಅಲರ್ಜಿ ಆದಾ ಶರ್ಮಾ ಆರೋಗ್ಯವನ್ನು ಏರುಪೇರು ಮಾಡಿದೆ ಎನ್ನಲಾಗಿದೆ.

ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಕಮಾಂಡೋ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಶೂಟಿಂಗ್ ಬಳಿಕ ಡಬ್ಬಿಂಗ್, ಇದೀಗ ಪ್ರಮೋಶನ್‌ನಲ್ಲಿ ಬ್ಯೂಸಿಯಾಗಿರುವ ಆದಾ ಶರ್ಮಾ ಆರೋಗ್ಯ ಕ್ಷೀಣಿಸಿದೆ. ಸದ್ಯ ಆಸ್ಪತ್ರೆಯಲ್ಲೇ ಇರುವ ಆದಾ ಶರ್ಮಾ ಆರೋಗ್ಯ ಸ್ಥಿರವಾಗಿದೆ. ಆದಾ ಶರ್ಮಾಗೆ ಕೆಲವು ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.

See also  ಮುಂದೆ ಪಾಕ್ ಭಾರತದ ಭಾಗವಾಗಲಿದೆ..! ಪಾಕಿಸ್ತಾನದ ಮುಖ್ಯಸ್ಥರಾಗಿ ನರೇಂದ್ರ ಮೋದಿ ಬೇಕು..! ಕೆಎಸ್ ಈಶ್ವರಪ್ಪ ಹೀಗೆ ಹೇಳಿದ್ದೇಕೆ?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget