Latestಕೇರಳಕ್ರೈಂವೈರಲ್ ನ್ಯೂಸ್

ಕೇರಳ : ಹಡಗಿನಲ್ಲಿ ತರುತ್ತಿದ್ದ 10 ತೈಲ ಕಂಟೇನರ್‌ ಗಳು ಸಮುದ್ರಪಾಲು..! ಕಂಟೇನರ್‌ ಗಳು ದಡಕ್ಕೆ ಬಂದರೆ ಅವುಗಳ ಬಳಿ ತೆರಳದಂತೆ ಆದೇಶ..!

1.4k

ನ್ಯೂಸ್ ನಾಟೌಟ್: ಕೇರಳದ ಕೊಚ್ಚಿಗೆ ಬರುತ್ತಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ತುಂಬಿದ ಕಂಟೇನರ್‌ ಗಳು ಸಮುದ್ರ ಪಾಲಾದ ಘಟನೆ ನಡೆದಿದೆ. ಸುಮಾರು 10 ಕಂಟೇನರ್‌ ಗಳು ಸಮುದ್ರ ಪಾಲಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಆದ್ದರಿಂದ ಕಂಟೇನರ್‌ ಗಳು ದಡಕ್ಕೆ ಬಂದರೆ ಅವುಗಳ ಬಳಿ ತೆರಳದಂತೆ ಕೇರಳ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರವು (KSDMA) ಸಾರ್ವಜನಿಕರಿಗೆ ಎಚ್ಚರಿಸಿದೆ. ಈಗಾಗಲೇ ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.

ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಘಟನೆ ಸಂಭವಿಸಿದೆ. ಲೈಬೀರಿಯಾ ಧ್ವಜ ಹೊತ್ತಿದ್ದ ಹಡಗು ವಿಝಿಂಜಂನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಒಂದು ಭಾಗಕ್ಕೆ ವಾಲಿದ್ದರಿಂದ ಸುಮಾರು 10 ಕಂಟೇನರ್‌ ಗಳು ಸಮುದ್ರಕ್ಕೆ ಬಿದ್ದಿವೆ ಎಂದು ವರದಿಗಳು ತಿಳಿಸಿವೆ.
ಹಡಗಿನಲ್ಲಿದ್ದ ಎಲ್ಲ 24 ಸಿಬ್ಬಂದಿಯನ್ನ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ರಕ್ಷಿಸಿದೆ. ಕಂಟೇನರ್‌ ಗಳಲ್ಲಿ ಮರೀನ್ ಗ್ಯಾಸ್ ಆಯಿಲ್ (ಹಡಗು, ನೌಕೆಗಳಲ್ಲಿ ಬಳಸುವ ಇಂಧನ) ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

‘ಅಪಾಯಕಾರಿ ವಸ್ತು’ ಹೊಂದಿರುವ ಕಂಟೇನರ್‌ ಗಳು ಸಮುದ್ರಕ್ಕೆ ಬಿದ್ದಿದ್ದು, ಅವು ದಡಕ್ಕೆ ಸೇರಬಹುದು ಎಂದು ಕರಾವಳಿ ಕಾವಲು ಪಡೆ ಎಚ್ಚರಿಸಿದೆ. ಒಂದು ವೇಳೆ ದಡದಲ್ಲಿ ತೇಲುತ್ತಿರುವ ವಸ್ತುಗಳು ಕಂಡುಬಂದರೆ, ಜನ ಅವುಗಳ ಹತ್ತಿರಕ್ಕೆ ಹೋಗದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಕಾವಲು ಪಡೆ ಸೂಚನೆ ನೀಡಿದೆ.

ತುಂಡುಡುಗೆ ತೊಟ್ಟು ತೃತೀಯ ಲಿಂಗಿ ಮಹಿಳೆಯಂತೆ ಅಶ್ಲೀಲ ವಿಡಿಯೋ ಮಾಡ್ತಾನೆ ಎಂದು ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ..! ಸರ್ಕಾರಿ ವೈದ್ಯನ ವಿರುದ್ಧ ಎಫ್.ಐ.ಆರ್..!

ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಅಪ್ಪ, ಅಮ್ಮ ಮತ್ತು ತಂಗಿ..! ಅಂತ್ಯಕ್ರಿಯೆಗೂ ಬಾರದ ಮಗಳು..!

ಮನುಷ್ಯರನ್ನು ಕೊಂದು ಮೆದುಳು ತಿನ್ನುತ್ತಿದ್ದ ವಿಚಿತ್ರ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ..! 14 ಜನರನ್ನು ಕೊಂದ ಆರೋಪ..!

See also  ಸಾವನ್ನೇ ಗೆದ್ದು ಬಂದ ರೀಲ್ಸ್ ಯುವತಿ! ಸತತ 12 ಗಂಟೆಗಳ ರೋಚಕ ಕಾರ್ಯಾಚರಣೆ ಹೇಗಿತ್ತು?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget